Breaking
18 Feb 2026, Wed

ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಗೌರವಪೂರ್ವಕ ಬೀಳ್ಕೊಡುಗೆ

ಬಂದಾರು: 2021–26 ಸಾಲಿನವರೆಗೆ ಐದು ವರ್ಷಗಳ ಕಾಲ ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಗೌರವಪೂರ್ವಕವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು.

ಈ ವೇಳೆ ಆಡಳಿತ ಮಂಡಳಿಗೆ ಸಹಕಾರ ನೀಡಿದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿವರ್ಗ, ಕಂದಾಯ ಇಲಾಖೆ, ಗ್ರಂಥಾಲಯ, ಸಂಜೀವಿನಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ವಾಹನ ಚಾಲಕರು, ದಾದಿಯರು, ನಲ್-ಜಲ್ ಮಿತ್ರರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಖಂಡಿಗ, ಉಪಾಧ್ಯಕ್ಷರಾದ ಪುಷ್ಪಾವತಿ ಬರಮೇಲು, ಮಾಜಿ ಅಧ್ಯಕ್ಷರಾದ ಪರಮೇಶ್ವರಿ ಕೆ ಗೌಡ, ಪುಯಿಲ, ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ದoಬೆತ್ತಿಮಾರು, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಸದಸ್ಯರುಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ಚೇತನ್ ಗೌಡ ಕೆಲೆಂಜಿಮಾರು, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಸುಚಿತ್ರ ಮುರ್ತಾಜೆ, ಅನಿತಾ ಕುರುಡಂಗೆ, ಪವಿತ್ರ ಮುರ, ವಿಮಲ ತಾರಿದಡಿ, ಶಾಂತ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ನರೇಗಾ ಯೋಜನೆಯ ಶರಣ್, ಪ್ರಾರ್ಥನಾ, ಬಂದಾರು ಅರೋಗ್ಯ ಇಲಾಖೆಯ ಸಿ ಎಚ್ ಓ ಜಗದೀಶ್, ಪಂಚಾಯತ್, ಕಂದಾಯ ಇಲಾಖೆ, ಗ್ರಂಥಾಲಯ, ಅರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ದಾದಿಯರು, ಸಂಜೀವಿನಿ ಒಕ್ಕೂಟ ಎಂ.ಬಿ.ಕೆ,ನಲ್ ಜಲ್ ಮಿತ್ರ, ನರೇಗಾ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *