ಬಂಟ್ವಾಳ: ತಾಲೂಕು ಸಂಗಬೆಟ್ಟು ಗ್ರಾಮದ ಮುಗೇರಗುಡ್ಡೆಯಲ್ಲಿರುವ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಅಲೇರ ಪಂಜುರ್ಲಿ, ಸ್ವಾಮಿ ಕೊರಗಜ್ಜ ಸಾನಿಧ್ಯ ಇದರ ಆಡಳಿತ ಸಮಿತಿ ಅಧ್ಯಕ್ಷರಾಗಿ ಸಂತೋಷ ಕುಮಾರ್ ಚೌಟ ಮಾಡಂದೂರು ಆಯ್ಕೆಯಾಗಿದ್ದಾರೆ.

ಸಂತೋಷ ಕುಮಾರ್ ಚೌಟ ಅವರು ಸ್ಥಳೀಯವಾಗಿ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲೂ ಹಲವಾರು ದೇವಸ್ಥಾನ, ದೈವಸ್ಥಾನ ಹಾಗೂ ಮಂದಿರಗಳ ವಿವಿಧ ಸಮಿತಿಗಳಲ್ಲಿ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಿದ್ದಾರೆ.








