Breaking
25 Sep 2026, Fri

ವ್ಯಕ್ತಿಯೋರ್ವನ ಮೇಲೆ ಸಾಕು ನಾಯಿ ದಾಳಿ

ಬಂಟ್ವಾಳ: ವಿದ್ಯುತ್ ಮೀಟರ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ.

ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಅವರಿಗೆ ನಾಯಿ ದಾಳಿ ಮಾಡಿದೆ.

ಫೆ. 16 ರಂದು ಸಂಪತ್ ಅವರು ರಾಯಿ ಕೈತ್ರೋಡಿ ಗ್ರಾಮದ ಮನೆಯೊಂದರಲ್ಲಿ ಮೀಟರ್ ರೀಡಿಂಗ್ ಮಾಡಿ ಮುಖ್ಯ ರಸ್ತೆಯತ್ತ ನಡೆದುಕೊಂಡು ತಮ್ಮ ಬೈಕ್‌ ಬಳಿ ತೆರಳುತ್ತಿದ್ದ ವೇಳೆ, ಮನೆಯಂಗಳದಲ್ಲಿದ್ದ ನಾಯಿಯೊಂದು ಸಂಕೋಲೆಯನ್ನು ತುಂಡರಿಸಿಕೊಂಡು ಬಂದು ದಾಳಿ ನಡೆಸಿದೆ.

ದಾಳಿಯಲ್ಲಿ ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *