ಪುಂಜಾಲಕಟ್ಟೆ: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಾ ಸಂಘಟನೆಯಾದ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕೊಳಕ್ಕೆ, ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ಇದರ 11 ನೇ ವಾರ್ಷಿಕೋತ್ಸವ ಮತ್ತು ಸಾಧಕ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಫೆ.14 ರಂದು ನಯನಾಡು ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ನಯನಾಡು ಉದ್ಯಮಿ ವಸಂತ ಸಾಲ್ಯಾನ್ ಅವರು ಉದ್ಘಾಟಿಸಲಿದ್ದು, ನಯನಾಡು ಸಂತ ಫ್ರಾನ್ಸಿಸ್ ಆಸಿಸ್ಸಿ ಚರ್ಚ್ ಧರ್ಮಗುರುಗಳಾದ ವಂ.ಫಾ.ಅನಿಲ್ ಅವಿಲ್ಡ್ ಲೋಬೋ ಅವರು ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಅವರು ಲೋಗೋ ಬಿಡುಗಡೆಗೊಳಿಸಿದ್ದು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಧಕರಾದ ಜೆರಾಲ್ಡ್ ಮೋರಾಸ್, ಚೇತನಾ, ಲಿಲ್ಲಿ ಡಿಸೋಜ, ಸುಹಾಸ್, ಶ್ರಾವ್ಯಾ,ರಕ್ಷಿತಾ, ಶಮಿತಾ, ಸಂಜನಾ ಅವರಿಗೆ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಬಳಿಕ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಎಲ್ಲೆ ದಾದ ಏರೆಗ್ ಗೊತ್ತು ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಸಂಚಾಲಕ ನೆಲ್ವಿಸ್ಟರ್ ಪಿಂಟೊ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







