Breaking
12 Feb 2026, Thu

ಜಾನಪದ ಕಲಾವಿದೆ ಕಮಲಾ ಪೆರುವಾಯಿ ಅವರಿಗೆ ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರ

ವಿಟ್ಲ: ಜಾನಪದ ಕಲೆಯಲ್ಲಿ ಪ್ರಸಿದ್ಧರಾಗಿರುವ ಪೆರುವಾಯಿ ಗ್ರಾಮದ ಮುಂಚಿರಬೆಟ್ಟು ನಿವಾಸಿ ಕಮಲಾ ಪೆರುವಾಯಿ ಅವರು ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಫೆ.16ರಂದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಕುಂಬಳೆ ಆರಿಕ್ಕಾಡಿಯ ಗೋಪಾಲ-ಯಮುನಾ ದಂಪತಿಗಳ ಪುತ್ರಿ ಹಾಗೂ ದಿ.ಮಾಂಕು ಎಂಬವರ ಪತ್ನಿಯಾದ ಇವರು ಮಾದಿರ ಕುಣಿತ, ಕನ್ಯಾಪು ಕುಣಿತ ಮೊದಲಾದ ಜಾನಪದ ಕುಣಿತಗಳಲ್ಲಿ ಪ್ರಸಿದ್ಧರಾಗಿದ್ದು ಚಾಪೆ ಹೆಣೆಯುವುದು, ಮುಟ್ಟಾಳೆ ಹೆಣೆಯುವುದರಲ್ಲಿ ನಿಪುಣರಾಗಿದ್ದಾರೆ.

Leave a Reply

Your email address will not be published. Required fields are marked *