ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ ಬಿದ್ದ ಘಟನೆ ಫೆ. 10ರಂದು ಮಧ್ಯಾಹ್ನ ಸಂಭವಿಸಿದೆ.

ಮೂರ್ಜೆ ಎಂಬಲ್ಲಿರುವ ಅಬ್ಬಾಸ್ ಅವರಿಗೆ ಸೇರಿದ ಗೇರು ತೋಟದ ಸಮೀಪ ಹಾದುಹೋಗಿರುವ ವಿದ್ಯುತ್ ಲೈನ್‌ನಿಂದ ಕಿಡಿಗಳು ಉಂಟಾಗಿ, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ 25ಕ್ಕೂ ಅಧಿಕ ಗೇರು ಮರಗಳು ಸುಟ್ಟು ಭಸ್ಮವಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದ್ದಾರೆ.








