Breaking
21 Jun 2026, Sun

ಇಸ್ಲಾಮಾಬಾದ್ ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಭೀಕರ ಸ್ಫೋಟ, ಕನಿಷ್ಠ 10 ಜನ ಸಾವು, 20 ಕ್ಕೂ ಅಧಿಕ ಮಂದಿಗೆ ಗಾಯ

ಪಾಕಿಸ್ತಾನ: ಪ್ರಾರ್ಥನೆ ನಡೆಯುತ್ತಿರುವಾಗ ಭೀಕರ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ತರ್ಲೈ ಪ್ರದೇಶದ ಇಮಾಮ್ಬರ್ಗಾ ಕಸ್ರ್-ಎ-ಖದೀಜತುಲ್ ಕುಬ್ರಾದಲ್ಲಿ ಫೆ.6 ರಂದು ಮಧ್ಯಾಹ್ನದ ವೇಳೆ ನಡೆದಿದೆ.

ಈ ಕುರಿತು ಪಾಕಿಸ್ತಾನ ಕೆಲವೊಂದು ಮಾಧ್ಯಮಗಳು ಮಾಹಿತಿ ನೀಡಿದ್ದು ಮಧ್ಯಾಹ್ನದ ಸಮಯದಲ್ಲಿ ಶಿಯಾ ಪ್ರಾರ್ಥನಾ ಸ್ಥಳದ ಮುಖ್ಯ ದ್ವಾರದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ಸ್ಫೋಟಿಸಲಾಗಿದೆ. ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಪಾಲಿಕ್ಲಿನಿಕ್ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂಬ ಮಾಹಿತಿ ನೀಡಿದೆ.

ಸ್ಫೋಟದ ನಂತರ, ಇಸ್ಲಾಮಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ನಗರಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ರಕ್ಷಣಾ ಮತ್ತು ಕಾನೂನು ಜಾರಿ ತಂಡಗಳು ಸ್ಥಳಕ್ಕೆ ಧಾವಿಸಿದ್ದು ಸದ್ಯ ಘಟನೆ ಕುರಿತು ತನಿಖೆ ನಡೆಸುತ್ತಿದೆ.

ಸದ್ಯ ಈ ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹತ್ತಿರದ ಕಟ್ಟಡಗಳ ಕಿಟಕಿಗಳು ಒಡೆದುಹೋಗಿವೆ. ರಸ್ತೆಯುದ್ದಕ್ಕೂ ಭಗ್ನಾವಶೇಷಗಳು ಹರಡಿಕೊಂಡಿವೆ. ವಿಡಿಯೋದಲ್ಲಿ ಮೃತ ದೇಹಗಳಿ ಛಿದ್ರಗೊಂಡಿರುವುದನ್ನು ಸ್ಫೋಟದ ಭೀಕರತೆಯನ್ನು ತೋರಿಸುತ್ತಿದೆ.

Leave a Reply

Your email address will not be published. Required fields are marked *