Breaking
8 Feb 2026, Sun

ಶಿವಮೊಗ್ಗದಲ್ಲಿ ವಾಸದ ಹಳೆ ಮನೆಯನ್ನು ಗನ್ ಫ್ಯಾಕ್ಟರಿ ಮಾಡಿಕೊಂಡಿದ್ದಾತ ಅರೆಸ್ಟ್

ಶಿವಮೊಗ್ಗ: ಮನೆಯನ್ನೇ ಗನ್ ಫ್ಯಾಕ್ಟರಿ ಮಾಡಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಫೆ. 6 ರಂದು ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಕ್ಷ್ಮಣಪ್ಪ (67) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮಣಪ್ಪ ಭದ್ರಾಪುರದಲ್ಲಿ ತಾನು ವಾಸ ಮಾಡುತ್ತಿದ್ದ ಹಳೆ ಮನೆಯನ್ನು ಗನ್ ತಯಾರಿಸುವ ಫ್ಯಾಕ್ಟರಿಯಾಗಿ ಮಾಡಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮನೆಯಲ್ಲಿ ತಯಾರಿಸಿ ಇಟ್ಟಿದ್ದ 7 ನಾಡ ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಡಿಎಸ್ಪಿ ಕೇಶವ ಕೆ.ಇ , ಸಿಪಿಐ ಸಂತೋಷ್ ಎಂ.ಪಾಟೀಲ್, ಎಸ್ಐ ಶರತ್ ಹೆಚ್ ಪಿ. ಸಿಬ್ಬಂದಿ ಕೊಟ್ರೇಶಪ್ಪ, ಪ್ರದೀಪ್.ಕೆ. ನಾಗರಾಜ ಹಾಗೂ ರವಿ ನಾಯ್ಕ, ರವಿಕುಮಾರ್ ಭಾಗವ ಭಾಗಿಯಾಗಿದ್ದು, ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *