Breaking
8 Feb 2026, Sun

ಮಾವನಿಂದಲೇ ಸೊಸೆಯ ಮೇಲೆ ಹಲ್ಲೆ

ಸುಳ್ಯ: ಅಕ್ರಮವಾಗಿ ಪ್ರವೇಶಿಸಿ ಮಾವನೇ ಸೊಸೆಯ ಮೇಲೆ ಹಲ್ಲೆ ನಡೆಸಿರುವಂತಹ ಘಟನೆ ಸಂಪಾಜೆಯಲ್ಲಿ ನಡೆದಿದೆ.

ಹಲ್ಲೆ ಮಾಡಿದ ವ್ಯಕ್ತಿಯನ್ನು ನಿತ್ಯಾನಂದ ರೈ (58) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ಸಾಹಿತ್ಯ ರೈ ಎಂದು ತಿಳಿದುಬಂದಿದೆ.

ಸಾಹಿತ್ಯ ರೈ ಅವರು ಮನೆಯ ಕೋಣೆಯಲ್ಲಿದ್ದ ವೇಳೆ, ಅವರ ಮಾವ ನಿತ್ಯಾನಂದ ರೈ ಅಕ್ರಮವಾಗಿ ಪ್ರವೇಶಿಸಿ, ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸಾಹಿತ್ಯ ರೈ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲೇ, ಪತಿಯೂ ಸಹ ತಂದೆಯ ಪರವಾಗಿ ನಿಂತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ಸಾಹಿತ್ಯ ರೈ ಅವರ ತಂದೆ ಹಾಗೂ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *