Breaking
22 Mar 2026, Sun

ಹೊಸ ಪಡಿತರ ಚೀಟಿ ನೀಡಲು ಅವಕಾಶ ಕಲ್ಪಿಸಬೇಕು: ರಾಜ್ಯಪಾಲರಿಗೆ ಮನವಿ ಮಾಡಿದ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ

ಮಂಗಳೂರು: ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಅವರು ಅಲ್ಪಾವಧಿಯಾದರೂ ಹೊಸ ಪಡಿತರ ಚೀಟಿ ನೀಡಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದು ಅರ್ಹತೆ ಇರುವ ಬಡ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸುಮಾರು ಮೂರು – ನಾಲ್ಕು ವರ್ಷಗಳಿಂದ ಹೊಸ ಪಡಿತರ ಚೀಟಿ ಮಾಡಲು ಅವಕಾಶ ಸಿಗುತ್ತಿಲ್ಲ. ಹೊಸ ಪಡಿತರ ಚೀಟಿ ಮಾಡಲು ಅರ್ಹತೆ ಇರುವ ಬಡವರು ಅದನ್ನೇ ನಂಬಿಕೊಂಡು ಜೀವನ ಮಾಡುವವರು ಪಡಿತರ ಚೀಟಿ ಇಲ್ಲದೆ ಕಂಗಾಲಾಗಿರುವ ಬಡವರು ಅಂಗವಿಕಲರು, ದುಡಿಯಲು ಅಸಮರ್ಥರು , ಅನಾರೋಗ್ಯ ಪೀಡಿತರಿಗೆ ಪಡಿತರ ಚೀಟಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರದಿಂದ ಸಿಗುವ ಪಡಿತವನ್ನು ಪಡೆಯಲು, ಸರ್ಕಾರದ ಒಂದು ದೊಡ್ಡ ಉತ್ತಮ ಯೋಜನೆಯಾದ ಅಯುಷ್ಮಾನ್ ಭಾರತ್ ಅವರ ಉಪಯೋಗವನ್ನು ಪಡೆಯಲು, ಬಡ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು, ಹಾಗೂ ಸರ್ಕಾರದ ಮುಖ್ಯ ಸವಲತ್ತುಗಳನ್ನು ಪಡೆಯಲು ಜನರು ತುಂಬಾ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಜೀವನದಲ್ಲಿ ಮುಖ್ಯ ದಾಖಲೆಯೇ ಪಡಿತರ ಚೀಟಿ ಆಗಿರುತ್ತದೆ.

ಸರ್ಕಾರದಿಂದ ಬರುವ ಹೊಸ ಹೊಸ ಯೋಜನೆ ಪಡೆಯಬೇಕಾದರೆ ಪಡಿತರ ಚೀಟಿ ಕಡ್ಡಾಯವಾಗಿರುತ್ತದೆ. ಅದು ಇಲ್ಲದಿದ್ದಲ್ಲಿ ಆ ಮಹತ್ತರವಾದ ಯೋಜನೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಾನು ಮುಖ್ಯಮಂತ್ರಿ ಅವರಿಗೂ ಹಾಗೂ ಆಹಾರ ಹಾಗೂ ನಾಗರಿಕ ಸಚಿವರಿಗೂ ಇದಕ್ಕೆ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸಿದ್ದು ಯಾವುದೇ ರೀತಿಯ ಉತ್ತರ ಮತ್ತು ಪ್ರಯೋಜನ ಸಿಗಲಿಲ್ಲ. ಆದ್ದರಿಂದ ತುರ್ತಾಗಿ ಅಲ್ಪ ಸಮಯವಾದರೂ ಅರ್ಹತೆ ಇರುವ ಬಡ ಕುಟುಂಬದವರಿಗೆ ಹೊಸ ಪಡಿತರ ಚೀಟಿ ಮಾಡಲು ಅವಕಾಶ ನೀಡಬೇಕು. ಸರ್ಕಾರ ಎಲ್ಲರೂ ಬಿಪಿಯಲ್ ಕಾರ್ಡ್ ಇದೆ ಎಂಬ ಒಂದೇ ಕಾರಣಕ್ಕೆ ಅರ್ಜಿ ಹಾಕುವುದನ್ನು ನಿಲ್ಲಿಸಿದ್ದಾರೇ ಆದರೆ ಇದರಿಂದ ವಂಚಿತರಾದದ್ದು ಬಡ ಜನಾಂಗದವರು. ತುಂಬಾನೆ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಆದರಿಂದ ಇದನ್ನು ಮನಗಂಡ ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಅವರು ರಾಜ್ಯಪಾಲರಿಗೆ ಪತ್ರ ಬರೆದು ಅರ್ಹತೆ ಇರುವವರಿಗೆ ಅಲ್ಪವಧಿ ಯಾದರೂ ಹೊಸ ಪಡಿತರ ಚೀಟಿ ಮಾಡಲು ಅವಕಾಶ ನೀಡಬೇಕು. ಹಾಗೆಯೇ APL ಪಡಿತರ ಚೀಟಿ ಮಾಡಲು ಅರ್ಹತೆ ಇರುವವರಿಗೂ ಕೂಡ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ತುರ್ತಾಗಿ ಗಮನಿಸಿ ಸರ್ಕಾರಕ್ಕೆ ನಿದರ್ಶನವನ್ನು ನೀಡಿ ರಾಜ್ಯದ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *