Breaking
22 Mar 2026, Sun

ಬೋರ್‌ವೆಲ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್‌ ಶಾಕ್‌: ಕಾರ್ಮಿಕ ಸಾವು

ಬೆಳ್ತಂಗಡಿ: ಅಡಿಕೆ ತೋಟದಲ್ಲಿ ಹಾಳಾಗಿದ್ದ ಬೋರ್‌ವೆಲ್‌ನ್ನು ಸ್ವಚ್ಛಗೊಳಿಸುವ ವೇಳೆ ಬೋರ್‌ವೆಲ್ ವಾಹನದ ಲಾರಿಯ ಡ್ರಿಲ್ ಮಾಡುವ ಯಂತ್ರ ವಿದ್ಯುತ್ ಲೈನ್‌ಗೆ ತಾಗಿ ಲಾರಿಯ ಬದಿ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.

ಮೃತ ಕಾರ್ಮಿಕನ್ನು ಛತ್ತೀಸ್‌ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಎಂದು ತಿಳಿದುಬಂದಿದೆ.

ಫೆ. 3 ರಂದು ಹಾಳಾಗಿದ್ದ ಬೋರ್‌ವೆಲ್‌ ರಿಪೇರಿ ಮಾಡುವ ಸಲುವಾಗಿ ಪುತ್ತಿಲ ನಿವಾಸಿ ರಫೀಕ್ ಅವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಮೀದ್ ಅವರಿಗೆ ಸೇರಿದ ಬೋರ್‌ವೆಲ್ ವಾಹನವನ್ನು ಕರೆಸಿದ್ದರು. ಬೋರ್‌ವೆಲ್ ಕೆಲಸ ಮುಗಿದ ಬಳಿಕ, ಲಾರಿಯ ಡ್ರಿಲ್ಲಿಂಗ್ ಯಂತ್ರವನ್ನು ಚಾಲಕ ಸಂಪತ್ ಕುಮಾರ್ ಅವರು ಅಗತ್ಯ ಮುಂಜಾಗ್ರತೆ ವಹಿಸದೆ ಕೆಳಗೆ ಇಳಿಸಿದ್ದ ಸಂದರ್ಭದಲ್ಲಿ ಅದು ವಿದ್ಯುತ್ ಲೈನ್‌ಗೆ ತಾಗಿದೆ. ಈ ವೇಳೆ ಲಾರಿಯ ಬದಿಯಲ್ಲಿ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ಅವರಿಗೆ ವಿದ್ಯುತ್‌ ಶಾಕ್‌ ತಗುಲಿ ಕೆಳಗೆ ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *