Breaking
21 Jun 2026, Sun

ಚಿರತೆ ದಾಳಿಗೆ ನಾಯಿ ಬಲಿ : ಜನರಲ್ಲಿ ಆತಂಕ

ಬೆಳ್ತಂಗಡಿ: ನಗರ ವ್ಯಾಪ್ತಿಯಲ್ಲಿ ಚಿರತೆ ಓಡಾಟ ಮುಂದುವರಿದಿದ್ದು, ಫೆ. 3ರಂದು ಸುದೆಮುಗೇರು ಪರಿಸರದಲ್ಲಿ ಚಿರತೆ ದಾಳಿಗೆ ನಾಯಿ ಬಲಿಯಾದ ಘಟನೆ ನಡೆದಿದೆ.

ಫೆ. 2ರಂದು ಉದಯನಗರ, ಕಳಿಯ ಹಾಗೂ ಮುಗುಳಿ ಪ್ರದೇಶಗಳಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಫೆ. 3ರಂದು ನಾಯಿ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.

ಈ ಪ್ರದೇಶವು ಶಾಲಾ ಮಕ್ಕಳೂ ಸೇರಿದಂತೆ ಜನಸಾಮಾನ್ಯರು ಉದ್ಯೋಗಕ್ಕಾಗಿ ಸಂಚರಿಸುವ ಪ್ರಮುಖ ದಾರಿಯಾಗಿದ್ದು, ಚಿರತೆ ಓಡಾಟದಿಂದಾಗಿ ಸ್ಥಳೀಯರು ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ. ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ಚಿರತೆಯನ್ನು ಕಣ್ಣಾರೆ ಕಂಡ ಜನರು ಆತಂಕಗೊಂಡು ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *