ಬಂಟ್ವಾಳ: ತಾಲೂಕಿನ ವಿಟ್ಲದ ಒಕ್ಕೆತ್ತೂರು ರಾಯಲ್ ವಿಲ್ಲಾ ಸಮೀಪವಿರುವ ವಕೀಲರೊಬ್ಬರ ಮನೆಯಲ್ಲಿ ಕಳ್ಳತನ ನಡೆದ ಘಟನೆ ನಡೆದಿದೆ.

ಸುಮಾರು ಒಂದು ತಿಂಗಳ ಹಿಂದೆ ಕುಟುಂಬದ ಸದಸ್ಯರು ವಿದೇಶಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.

ಮನೆಯೊಳಗೆ ಪ್ರವೇಶಿಸಿದ ಕಳ್ಳರು ಕಪಾಟುಗಳನ್ನು ಜಾಲಾಡಿದ್ದಾರೆ . ಆದರೆ ಅಮೂಲ್ಯ ವಸ್ತುಗಳು ನಗದು ಸಿಗದಿದ್ದಾಗ, ವಕೀಲರಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.



