Breaking
3 Feb 2026, Tue

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರ ನಮಕ ಚಮಕ ವೇದ ಸೂಕ್ತಗಳ ಪಾರಾಯಣ

ಬೆಳ್ತಂಗಡಿ : ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರ ಪಾರಾಯಣ ಸಮಿತಿ ಬಂಟ್ವಾಳ ವತಿಯಿಂದ ಫೆ.1 ರಂದು ರುದ್ರ ನಮಕ ಚಮಕ ವೇದ ಸೂಕ್ತಗಳ ಪಾರಾಯಣ ಸಾಮೂಹಿಕವಾಗಿ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಅರ್ಚಕ ವಿಷ್ಣುಮೂರ್ತಿ ಕಾರಂತ, ಎ ರವಿ ಶಂಕರ ಮೈಯ್ಯ, ಬಂಟ್ವಾಳ ದೂರವಾಣಿ ಇಲಾಖೆ ನಿವೃತ್ತ ಇಂಜಿನಿಯರ್ ಎಲ್ಎನ್ ಭಟ್. ಬಂಟ್ವಾಳ ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಚಾರ್ಯ ಸೀತಾರಾಮ ಮೈಯ್ಯ, ಎಂ ಶಾಂತರಾಮರಾವ್, ಎನ್ ರಾಮಚಂದ್ರಮಯ್ಯ, ಕೆ ರಾಜರಾಮ ಐತಾಳ, ಎ ದನೇಶ್ವರ ರಾವ್, ಎಂ ಜಯರಾಮ ಮಯ್ಯ, ಚಂದ್ರಮೋಹನರಾವ್, ದೇವಾಲಯದ ಆಡಳಿತದಾರ ಜಯರಾಮ ಶೆಟ್ಟಿ ಸೇರಿದಂತೆ ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *