ಪುತ್ತೂರು: ಅಕ್ರಮವಾಗಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೂತ್ತೂರಿನ ಮೊಹಮ್ಮದ್ ಹರ್ಷದ್ (33), ಮಹಮ್ಮದ್ ಆರೀಶ್ (31), ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46) , ಬಂಟ್ವಾಳ ನಿವಾಸಿ ಮುಸ್ತಾಫ (46) ಎಂದು ಗುರುತಿಸಲಾಗಿದೆ.

ಆರೋಪಿಗಳು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಆರೋಪಿಗಳಿಂದ ಅಂದಾಜು ರೂ. 50,000/- ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





