Breaking
6 May 2026, Wed

ಉಡುಪಿ ದೋಣಿ ದುರಂತ: ಇನ್ನೋರ್ವ ಯುವತಿ ಸಾವು, ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ಉಡುಪಿ: ಕೋಡಿ ಕನ್ಯಾನ ಗ್ರಾಮದ ಕೋಡಿಬೇಂಗ್ರೆ ಅಳಿವೆಬಾಗಿಲಿನಲ್ಲಿ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಜ.27 ರಂದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಯುವತಿಯನ್ನು ಮೈಸೂರಿನ ದಿಶಾ (26) ಎಂದು ಗುರುತಿಸಲಾಗಿದೆ.

ಮೈಸೂರು ಗೋಲ್ ಕ್ರಿಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ 28 ಮಂದಿಯ ತಂಡ ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದರು. ಮಲ್ಪೆಯ ಕದಿಕೆಯಲ್ಲಿರುವ ಹೋಮ್ ಸ್ಟೇನಲ್ಲಿ ತಂಗಿದ್ದ ಇವರು ಮರುದಿನ ವಿಹಾರಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ದೋಣಿ ಮಗುಚಿ ಬಿದ್ದಿತ್ತು.

ಈ ದುರಂತದಲ್ಲಿ ಈಗಾಗಲೇ ಚಾಮರಾಜನಗರದ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ(27) ಹಾಗೂ ಚಾಮರಾಜನಗರ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು (25) ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇನ್ನೋರ್ವ ಯುವತಿ ಸಾವನಪ್ಪಿದ್ದು ಈ ಮೂಲಕ ಈ ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *