ಮೂಡಬಿದಿರೆ: ಕಾರು ಹಾಗೂ ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ನೆಲ್ಲಿಕಾರು-ಕಾರ್ಕಳ ಮುಖ್ಯ ರಸ್ತೆಯಲ್ಲಿ ಜ. 26 ರಂದು ನಡೆದಿದೆ.
ಗಾಯಗೊಂಡವರನ್ನು ಟೆಂಪೋ ಚಾಲಕ ಕೃಷ್ಣರಾಜ್, ಕಾರು ಚಾಲಕ ಲಲಿತೇಶ್ ಗೌಡ ಹಾಗೂ ಬಾಲಕ ಪ್ರವೀಣ್ ಎಂದು ಗುರುತಿಸಲಾಗಿದೆ.

ಗೂಡ್ಸ್ ಟೆಂಪೋ ಕಾರ್ಕಳ ಕಡೆಯಿಂದ ಹೊಸಮಾರು ಕಡೆಗೆ ತೆರಳುತ್ತಿದ್ದು ಕಾರು ಹೊಸಮಾರು ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಹಾಗೂ ಟೆಂಪೋದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ತಕ್ಷಣವೇ ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.




