Breaking
3 Feb 2026, Tue

ಹಾಲು ಉತ್ಪಾದಕರ ಸಂಘದ ಸಮೀಪ ವಾಹನಕ್ಕೆ ಎದುರಾದ ಚಿರತೆ

ಬೆಳ್ತಂಗಡಿ: ಚಿರತೆಯೊಂದು ಹಾಲು ಸಂಗ್ರಹ ವಾಹನಕ್ಕೆ ಎದುರಾದ ಘಟನೆ ಜ. 25 ರಂದು ಗ್ರಾ. ಪಂ. ವ್ಯಾಪ್ತಿಯ ಕನ್ಯಾಡಿ-ಪಡ್ಡು ರಸ್ತೆಯ ಕಯ್ಯಂಗು ಎಂಬಲ್ಲಿ ನಡೆದಿದೆ.

ಮುಂಜಾನೆ ಸುಮಾರು 7 ಗಂಟೆಗೆ ಹಾಲು ಸಂಗ್ರಹಕ್ಕೆ ತೆರಳುತ್ತಿದ ವೇಳೆ ಸ್ಥಳೀಯ ಹಾಲು ಉತ್ಪಾದಕರ ಸಂಘದ ಸಮೀಪ ಚಿರತೆಯು ಕಾಣಿಸಿಕೊಂಡಿದೆ. ಬಳಿಕ ಅದು ಅಲ್ಲೇ ಹತ್ತಿರದ ಅರಣ್ಯ ಕಡೆಗೆ ತೆರಳಿದೆ.

ಕೆಲ ದಿನಗಳಿಂದ ಈ ಪರಿಸರದಲ್ಲಿ ಚಿರತೆಯು ಸಂಚರಿಸುತ್ತಿರುವುದು ಕಂಡುಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *