Breaking
23 Mar 2026, Mon

ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ

ಮುಡಿಪು: ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ.24 ರಂದು ಮುಡಿಪು ಮಿತ್ತಬರೆ ಸಮೀಪ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ‘ಸ್ವಾತಿ ಆರ್ಟ್ಸ್’ ಹೆಸರಿನಲ್ಲಿ ಬ್ಯಾನ‌ರ್ ಬರವಣಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್(49) ಎಂದು ಗುರುತಿಸಲಾಗಿದೆ.

ಸುಮಾರು ಮೂರೂವರೆ ದಶಕಗಳಿಂದ ಮುಡಿಪುವಿನಲ್ಲಿ ‘ಸ್ವಾತಿ ಆರ್ಟ್ಸ್’ ಹೆಸರಿನಲ್ಲಿ ಬ್ಯಾನ‌ರ್ ಬರೆಯುವ ಕೆಲಸವನ್ನು ಮಾಡುತ್ತಿದ್ದ ಸತೀಶ್ ಅವರು ಸಂಗೀತ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಇದರ ಜೊತೆಗೆ ಕೀಬೋರ್ಡ್ ತರಗತಿ ನಡೆಸುವ ಮೂಲಕ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣವನ್ನೂ ನೀಡಿದ್ದಾರೆ.

ಜ. 24 ರಂದು ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *