ಕಾಸರಗೋಡು: ಕೂಡ್ಲು ಮೀಪುಗುರಿಯ ಶೆಟ್ಟಿಗುಡ್ಡೆ ರಸ್ತೆಯಲ್ಲಿ ವಾಸವಾಗಿದ್ದ ಗಿರೀಶ್ ಅವರ ಪುತ್ರಿ ಪೃತ್ವಿಕ (17) ಅವರು ಗುರುವಾರ ಮನೆಯ ಬೆಡ್‌ರೂಂನಲ್ಲಿ ಫ್ಯಾನ್‌ಗೆ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿದುಬಂದಿದೆ. ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಮಂಗಳೂರಿನ ಕಾಲೇಜೊಂದರಲ್ಲಿ ಪದವಿ ತರಗತಿಗೆ ಸೇರ್ಪಡೆಗೊಂಡಿದ್ದರು.

ಈ ಕುರಿತು ಸಂಬಂಧಿತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




