Breaking
11 Aug 2026, Tue

ಕಲ್ಲಡ್ಕ ಜೆಮ್ ಪಬ್ಲಿಕ್ ಸ್ಕೂಲ್‌ನಲ್ಲಿ ಋತುಚಕ್ರ ಹಾಗೂ ಡೈಪರ್ ಕುರಿತು ಅರಿವು ಕಾರ್ಯಾಗಾರ

ಕಲ್ಲಡ್ಕ: ಜೆಮ್ ಪಬ್ಲಿಕ್ ಸ್ಕೂಲ್ ನಲ್ಲಿ ಗೊಳ್ತಮಾಜಲ್ ಗ್ರಾಮ ಪಂಚಾಯತ್, ಹಸಿರು ದಳ ಮಂಗಳೂರು ಹಾಗೂ ಆಶೀರ್ವಾದ ಸಂಜೀವಿನಿ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಋತುಚಕ್ರ ಹಾಗೂ ಡೈಪರ್ ಕುರಿತು ಅರಿವು ಕಾರ್ಯಾಗಾರ ಜೂನ್ 25ರಂದು ನಡೆಯಿತು.

ಕಾರ್ಯಾಗಾರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ದುಷ್ಪರಿಣಾಮಗಳು, ಅವುಗಳಿಗೆ ಪರ್ಯಾಯವಾಗಿ ಬಳಸಬಹುದಾದ ಸುಸ್ಥಿರ ಆಯ್ಕೆಗಳು ಹಾಗೂ ಡೈಪರ್ ಬಳಕೆಯ ಕುರಿತು ವಿದ್ಯಾರ್ಥಿನಿಯರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ವಿದ್ಯಾರ್ಥಿನಿಯರು ಮುಕ್ತವಾಗಿ ಚರ್ಚೆಯಲ್ಲಿ ಭಾಗವಹಿಸಿ, ಋತುಚಕ್ರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹಾಗೂ ತಮ್ಮ ಅನುಮಾನಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಿಯ ಹಾಗೂ ರೇಖಾ ಮಾಹಿತಿ ನೀಡಿದರು. ಭವ್ಯ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನಿರಂಜನ್, ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ, ಎಂ.ಬಿ.ಕೆ ಭವಾನಿ, ಎಲ್‌.ಸಿ.ಆರ್‌.ಪಿ ಅರುಣಾಕ್ಷಿ ಹಾಗೂ ಹಸಿರು ದಳ ಮೇಲ್ವಿಚಾರಕ ಸಾಂತಪ್ಪ ಉಪಸ್ಥಿತರಿದ್ದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *