ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವರೂ ಮೃತಪಟ್ಟ ಘಟನೆ ಜ.25 ರಂದು ನಡೆದಿದೆ.
ಮೃತಪಟ್ಟವರನ್ನು ಕನ್ಯಾಡಿ ಬೈಲಿನ ನಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಡ್ಯಾರು ನಿವಾಸಿ ಶಿವಪ್ರಸಾದ್ ಅಡಪ (48) ಎಂದು ಗುರುತಿಸಲಾಗಿದೆ.

ತೋಟದ ಪಂಪ್ ಶೆಡ್ ನಲ್ಲಿ ಮುಂಜಾನೆ ವೇಳೆ ಸ್ವಿಚ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಈ ಘಟನೆ ಸಂಭವಿಸಿದೆ. ತಕ್ಷಣವೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.




