Breaking
23 Mar 2026, Mon

ಫೆ. 7: ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ಇದರ 14ನೇ ವರ್ಷದ ವಾರ್ಷಿಕೋತ್ಸವ: ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಬಂಟ್ವಾಳ: ಹಿರಿಯ ರಂಗ ಕಲಾವಿದರ ಆರೋಗ್ಯ ಸೇವೆಯ ಸದುದ್ದೇಶದೊಂದಿಗೆ, ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ಇದರ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಫೆ. 7 ರಂದು ಕೊಯಿಲದ ಆಳ್ವಾಸ್ ಗಾರ್ಡನ್ ಶ್ರೀ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಸಮೀಪದಲ್ಲಿ ಸಾಂಸ್ಕೃತಿಕ ಸಂಭ್ರಮ–ಸನ್ಮಾನ ಗೌರವ ಕಾರ್ಯಕ್ರಮವು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ತುಳುನಾಡಿನ ಖ್ಯಾತ ಗಾಯಕರುಗಳಾದ ಶಮೀರ್ ಮುಡಿಪು, ನಂದಿನಿ ಗಾಣಿಗ ಹಾಗೂ ಅಕ್ಷಯ್ ಕಾವಲಕಟ್ಟೆ ಅವರ ಸ್ವರಮಾಧುರ್ಯದಲ್ಲಿ ಸಂಗೀತ ರಸಮಂಜರಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಕಾಮಿಡಿ ರಾಜೆ ಖ್ಯಾತಿಯ ವಿನ್ಯಾಸ್ ವಾಮಂಜೂರು ಅವರಿಂದ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ಕರಾವಳಿ ಗಾನ ಕೋಗಿಲೆ, ಸರಿಗಮಪ ಸೀಸನ್–20ರ ಫೈನಲಿಸ್ಟ್ ಸಮನ್ವಿ ರೈ ಪುತ್ತೂರು ಅವರ ಗಾಯನ ಹಾಗೂ ಸ್ಟಾರ್ ಕಿಡ್ಸ್ ಗುರುಪುರ ತಂಡದಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯದ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ಈ ವರ್ಷದ ಸೂಪರ್ ಹಿಟ್ ನಾಟಕ ‘ಗೆಂದಗಿಡಿ’, ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *