ಬಂಟ್ವಾಳ: ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಸಜೀಪ ಮುನ್ನೂರು ಗ್ರಾಮದ ಶಾರದಾ ನಗರದಲ್ಲಿ ಶಾರದಾ ಶಾಖೆಯನ್ನು ಜ್ಯೋತಿ ಬೆಳಗುವ ಮೂಲಕ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಹಿಂದೂ ಜನಜಾಗೃತಿಯ ಶಾರದಾ ಶಾಖೆಯ ಮೂಲಕ ಪರಿಸರದ ಹಿಂದುಗಳಿಗೆ ಧಾರ್ಮಿಕ ಸಾಂಸ್ಕೃತಿಕ ಮಾಹಿತಿಗಳು ತತ್ವ ಸಿದ್ಧಾಂತಗಳು ತಮ್ಮ ಜೀವಮಾನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿ ತನ್ಮೂಲಕ ಹಿಂದು ಧರ್ಮ ಉದ್ಧಿಪನಗೊಳ್ಳಲಿ ಎಂಬುದಾಗಿ ಹಾರೈಸಿದರು.

ಜಿಲ್ಲಾ ಜನಜಾಗೃತಿ ಸಂಚಾಲಕ ವಿಜಯ ಕುಮಾರ್ ಮಾತನಾಡಿ ಸನಾತನ ಸಂಸ್ಥೆ ಹಿಂದೂಗಳಿಗೆ ಧಾರ್ಮಿಕ ಮೌಲ್ಯಧಾರಿತ ಶಿಕ್ಷಣವನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಪರಿಸರದ ಹಿಂದುಗಳು ಪಡೆಯುವಂತೆ ವಿನಂತಿಸಿದರು.
ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ರಮೇಶ್ ಕಾರ್ಯಕ್ರಮ ನಿರೂಪಿಸಿದರು.



