Breaking
26 Jun 2026, Fri

ಬೊಬ್ಬರ್ಯ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

ಕೊಯಿಲ: ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಬೊಬ್ಬರ್ಯ ದೈವಸ್ಥಾನಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿತು. ಅರಳ ಶ್ರೀ ಗರುಡ ಮಹಾಕಾಳಿ ದೇವಳದ ಪ್ರಧಾನ ಅರ್ಚಕ ಎ. ಹರೀಶ ಭಟ್ ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸುಮಾರು 13 ವರ್ಷಗಳ ಹಿಂದೆ ಕೊಯಿಲ ಹಾಗೂ ಪಂಜಿಕಲ್ಲು ಗ್ರಾಮದ ಗಡಿ ಭಾಗವಾದ ಬಬ್ಬರಬೈಲಿನಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕರಾವಳಿ ಮೀನುಗಾರರ ಆರಾಧ್ಯ ದೈವವಾದ ಬೊಬ್ಬರ್ಯ ದೈವಸ್ಥಾನ ನಿರ್ಮಿಸಿ, ದೈವ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನೆರವೇರಿಸಲಾಗಿತ್ತು.


ಇದೇ ಪರಿಸರದಲ್ಲಿ ಅಣ್ಣಪ್ಪ ಪಂಜುರ್ಲಿ, ಗುಳಿಗ ಹಾಗೂ ಕೊರಗಜ್ಜ ಗುಡಿಗಳೂ ನಿರ್ಮಾಣಗೊಂಡಿದ್ದು, ಅವುಗಳ ಕಲಶಾಭಿಷೇಕವೂ ನಡೆದಿತ್ತು ಎಂದು ಆಡಳಿತ ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಬ್ಯಾರಿಕೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಚೌಟ, ಪ್ರಮುಖರಾದ ದೇರಾಜೆಗುತ್ತು ಯಶೋಧರ ರೈ, ಹರಿಶ್ಚಂದ್ರ ಹೆಗ್ಡೆ ಅಂತರಗುತ್ತು, ಶೇಖರ ಅಂಚನ್ ಪಿಲ್ಕಾಜೆಗುತ್ತು, ರಾಜೇಶ್ ಜೈನ್ ಪಡ್ರಾಯಿಗುತ್ತು, ರಾಜೇಶ್ ಸಪಲ್ಯ ಗೋವಿಂದಬೆಟ್ಟ, ಸುಧೀರ್ ಶೆಟ್ಟಿ ಹೋರಂಗಳ, ರಾಜೇಶ್ ಆಚಾರ್ಯ ಪಟ್ರಾಡಿ, ದಿನೇಶ ಶೆಟ್ಟಿ ಮಡಂದೂರು, ಜಯಂತ ಪೂಜಾರಿ ಪಿಲ್ಕಾಜೆ, ಗಂಗಾಧರ ಪಿಲ್ಕಾಜೆ, ಕಿರಣ್ ಕುಮಾರ್ ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಪ್ರಭಾಕರ ಪ್ರಭು ಕರ್ಪೆ, ಉಮೇಶ ಸಪಲ್ಯ ಗೋವಿಂದಬೆಟ್ಟ, ಕೇಶವ ಶೆಟ್ಟಿ ಪಿಲ್ಕಾಜೆ, ಜಿ.ದಾಮೋದರ ಬಂಗೇರ, ಚಂದ್ರಶೇಖರ ಶೆಟ್ಟಿ ಅರಳ, ಸುಕುಮಾರ್ ಶೆಟ್ಟಿ ಅರಳ, ಚಂದ್ರಶೇಖರ ಗೌಡ ಕಾರಂಬಡೆ, ಕೆ.ಪರಮೇಶ್ವರ ಪೂಜಾರಿ, ಜಯರಾಮ ಅಡಪ, ಪ್ರವೀಣ ಅಂಚನ್ ಕೊಯಿಲ, ಜನಾರ್ದನ ಪೂಜಾರಿ ಪಿಲ್ಕಾಜೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *