ಬಂಟ್ವಾಳ: ಯುವ ಗಾಣಿಗ ಸಂಘದಿಂದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣ ಬಳಿ ಭಾನುವಾರ (ಆ.09) ನಡೆದಿದೆ.

ಕೃಷಿ ಪ್ರಧಾನ ಜಿಲ್ಲೆಯಲ್ಲಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಹಾಗೂ ಆಟಿ ತಿಂಗಳ ಆಹಾರ ಪದ್ಧತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಯುವ ಗಾಣಿಗ ಸಂಘ ನಡೆಸುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಬಿ.ಸಿ.ರೋಡು ಸ್ಪರ್ಶ ಸಭಾಂಗಣದ ಬಳಿ ಗಾಣಿಗರ ಯುವ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಗತಿಪರ ಕೃಷಿಕ ಸಂಜೀವ ಸಪಲ್ಯ ಕೇದಗೆ ಹಾಗೂ ಯಶೋಧ ಸಪಲ್ಯ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಾದ ಕೃಷ್ಣಪ್ಪ ಗಾಣಿಗ, ಆಯುಷ್, ರಿಶಾನ ಹಾಗೂ ಜಾನ್ವಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬಾರ್ಕೂರು ಗೋಪಾಲಕೃಷ್ಣ ದೇವಳದ ಅಧ್ಯಕ್ಷ ಉದಯ ಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಎಸ್. ಮಾವೆ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಭಯಂಕೇಶ್ವರ ದೇವಳದ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ, ನಾಲ್ಕೈತ್ತಾಯ ದೈವಸ್ಥಾನ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಯುವ ವೇದಿಕೆ ಅಧ್ಯಕ್ಷ ಭುವನೇಶ್ ಮೊಗರ್ನಾಡು, ಗೌರವಾಧ್ಯಕ್ಷ ನವೀನ್ ಮಾಣಿಮಜಲು, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಪ್ರಮುಖರಾದ ನಾಗರಾಜ ಗಾಣಿಗ, ರಘುರಾಮ ಬೈಕಾಡಿ, ರಾಮಕೃಷ್ಣ ಹಾರಾಡಿ, ಗಣೇಶ್ ಗಾಣಿಗ, ನರ್ಸಪ್ಪ ಅಮೀನ್, ರಾಜೇಶ್ ಮೆಂಡನ್, ಸಚಿನ್ ಮೆಲ್ಕಾರ್, ಬಾಲಕೃಷ್ಣ ಸೆರ್ಕಳ, ಮೋಹನ್ ಕೆ. ಶ್ರೀಯಾನ್ ರಾಯಿ, ಆಶಾ ವೇದವ, ಪದ್ಮನಾಭ ಇಡ್ಕಿದು, ಕೃಷ್ಣಪ್ಪ ಬಂಗೇರ, ವಸಂತ ಪಿ., ಸಂದೀಪ್ ಮಾರ್ನಬೈಲು, ಪ್ರವೇಶ್ ಗಾಣಿಗ ಪುತ್ರೋಟಿ ಬೈಲು , ವಿಕ್ರಮ್ ಬಂಗೇರ ಸಜಿಪ, ಕೃಷ್ಣಪ್ಪ ಕೆಮ್ಮನಾಜೆ, ದಿನೇಶ್ ಬಂಗೇರ, ಪದ್ಮನಾಭ ಜಕ್ರಿಬೆಟ್ಟು ಜಗದೀಶ್ ಕುಂದರ್, ಸದಾಶಿವ ಪುತ್ರನ್, ಶರತ್ ಕುರ್ಚಿಪಳ್ಳ, ರವೀಂದ್ರ ಸಪಲ್ಯ, ಪ್ರಸಾದ್ ಕರ್ಬೆಟ್ಟು, ತೀರ್ಪುಗಾರರಾದ ಬಾಲಕೃಷ್ಣ ಮಾಸ್ಟರ್, ಜಯರಾಜ್ ಕಾಂಚನ್, ರೋಹಿಣಿ ಅಶೋಕ್, ಅನುಷಾ ಕಲ್ಲಡ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಧೃತಿ ಮತ್ತು ರಿಧಿ ಪ್ರಾರ್ಥಿಸಿದರು. ಕೃಷ್ಣಪ್ಪ ಅಂತರ ಸ್ವಾಗತಿಸಿದರು. ವೆಂಕಪ್ಪ ಮಾಸ್ಟರ್ ಧನ್ಯವಾದ ಸಲ್ಲಿಸಿದ್ದು, ತಾರನಾಥ ಕರ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.


