Breaking
23 Mar 2026, Mon

ಜ. 25: ಸಿದ್ದಕಟ್ಟೆಯಲ್ಲಿ ಬ್ರಹತ್ ಹಿಂದೂ ಸಂಗಮೋತ್ಸವ

ಬಂಟ್ವಾಳ: ಕೋಟಿ ಸವಾಲಿಗೆ ಉತ್ತರ ಒಂದೇ, ಹಿಂದೂ ಭಾವದ ಜಾಗರಣ ಎಂಬ ವೇದ ಘೋಷದೊಂದಿಗೆ ಹಿಂದೂ ಭಾಂದವರನ್ನೆಲ್ಲ ಒಟ್ಟುಗೂಡಿಸಿ ದೇಶ ಭಕ್ತಿಯೊಂದಿಗೆ ರಾಷ್ಟ್ರದ ಕಾಯಕದಲ್ಲಿ ಭಾಗವಹಿಸುವಿಕೆಯ ಪ್ರತೀಕವಾಗಿ ಹಿಂದೂ ಸಂಗಮ ಆಯೋಜನ ಸಮಿತಿ ಬಂಟ್ವಾಳ ಇದರ ವತಿಯಿಂದ ಜ. 25 ರಂದು ಸಿದ್ದಕಟ್ಟೆಯಲ್ಲಿ ಬ್ರಹತ್ ಹಿಂದೂ ಸಂಗಮೋತ್ಸವವನ್ನು ನಡೆಯಲಿದೆ.

ಈ ಹಿಂದೂ ಸಂಗಮ ನಿರ್ವಹಣಾ ಸಮಿತಿ ಸಿದ್ದಕಟ್ಟೆಯ ಸಂಯೋಜಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಅವರು ಹಿಂದೂ ಭಾಂದವರಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

ನಾಳೆ ಸಂಜೆ 3 ಗಂಟೆಗೆ ಸಿದ್ದಕಟ್ಟೆ ಶ್ರೀ ರಾಮನಗರದಿಂದ ಸಿದ್ದಕಟ್ಟೆ ಕೇಂದ್ರ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ಹೊರಡಲಿದೆ. ಸಂಜೆ ಗಂಟೆ 4 ರಿಂದ 5 ರ ವರೆಗೆ ದೇಶ ಭಕ್ತಿಗೀತೆ ಕಾರ್ಯಕ್ರಮ, ಬಳಿಕ ಸಭಾ ಕಾರ್ಯಕ್ರಮ ಜರುಗಲಿದ್ದು ಸಭಾ ಕಾರ್ಯಕ್ರಮ ನಂತರ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಗಬೆಟ್ಟು ಮಂಡಲದ ವ್ಯಾಪ್ತಿಯ ಕರ್ಪೆ, ಸಂಗಬೆಟ್ಟು, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳ ವ್ಯಾಪ್ತಿಯ ಎಲ್ಲಾ ಹಿಂದೂ ಭಾಂದವರು ಪಕ್ಷ ಭೇದ ಮತ್ತು ಜಾತಿ ಭೇದ ಮರೆತು ಒಗ್ಗಟ್ಟಿನಲ್ಲಿ ಭಾಗವಹಿಸಿ ಈ ಬೃಹತ್ ಹಿಂದೂ ಸಂಗಮವನ್ನು ಯಶಸ್ವಿಗೊಳಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಸಿದ್ಧಕಟ್ಟೆಯ ಕೇಂದ್ರ ಭಾಗದಲ್ಲಿ ಧ್ವಜಾರೋಹಣ ಮಾಡಲಾಗಿದ್ದು ಈ ಸಂದರ್ಭ ಗಣ್ಯಾತಿ ಗಣ್ಯರು, ಹಿಂದು ಭಾಂದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *