Breaking
25 Sep 2026, Fri

ಮದ್ಯಪಾನ ಮಾಡಿ ಕಾರು ಚಾಲನೆ; ಸ್ಕೂಟಿಗೆ ಢಿಕ್ಕಿ, ಸವಾರ ಗಂಭೀರ ಗಾಯ – ಚಾಲಕ ಬಂಧನ

ಉಡುಪಿ: ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪಾಲದ ಈಶ್ವರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಸಂಬಂಧ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಗಾಯಾಳುವನ್ನು ಉಡುಪಿ ತಾಲೂಕಿನ ಅಲೆವೂರು ನಿವಾಸಿ ಅಭಿಷೇಕ್ ನಾಯಕ್ (21) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯನ್ನು ಕಾರ್ಕಳದ ಮುಡಾರು ನಿವಾಸಿ ಸಮೇಗ್ದ್ ಎಲ್.ಜೆ (29) ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪಾಲದ ಸಾಯಿಸಾಗರ್ ಹೋಟೆಲ್ ಮುಂಭಾಗದ ಯು-ಟರ್ನ್ ರಸ್ತೆಯ ಬಳಿ ಬರುತ್ತಿದ್ದ ಅಭಿಷೇಕ್ ಅವರ ಸ್ಕೂಟಿಗೆ, ಎಂಐಟಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡಿವೆ.

ಘಟನೆಯಲ್ಲಿ ಅಭಿಷೇಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *