ಬಂಟ್ವಾಳ: ಮೈಸೂರಿನಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಎರಡು ದಿನಗಳ ‘ಅನುಬಂಧ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಗೆ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181 ಮಟ್ಟದ ಪ್ರತಿಷ್ಠಿತ ‘ಡೈಮಂಡ್ ಪ್ಲಸ್’ ಪ್ರಶಸ್ತಿ ಲಭಿಸಿದೆ.

ಕಳೆದ ಸಾಲಿನಲ್ಲಿ ರೋಟರಿ ಇಮೇಜ್ ವೃದ್ಧಿ, ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ರೋಟರಿ ಸಂಸ್ಥೆಗೆ ನೀಡಿದ ಟಿ.ಆರ್. ಎಫ್ –ಪೋಲಿಯೋ ಫಂಡ್ ಸೇರಿದಂತೆ ವಿವಿಧ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ಹಾಗೂ ಮಾಜಿ ಗವರ್ನರ್ ವಿಕ್ರಂ ದತ್ತ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಹಿರಿಯ ಸದಸ್ಯ ಕೆ. ರಮೇಶ್ ನಾಯಕ್ ರಾಯಿ ಅವರಿಗೆ ‘ಶೈಕ್ಷಣಿಕ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರು, ನಿಯೋಜಿತ ಗವರ್ನರ್ ಶ್ರುತಿ ಮಾಡ್ತಾ, ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ. ಪದ್ಮರಾಜ ಬಲ್ಲಾಳ್, ನಿಯೋಜಿತ ಅಧ್ಯಕ್ಷೆ ಗೀತಾ ಪಿ. ಬಲ್ಲಾಳ್ ಹಾಗೂ ಸದಸ್ಯರಾದ ರಾಜೇಶ್ ಶೆಟ್ಟಿ ಸೀತಾಳ, ಸೆಬೆಸ್ಟಿನ್ ಮಿನೇಜಸ್, ರೂಪಾ ರಾಜೇಶ್ ಶೆಟ್ಟಿ, ಪ್ರೀತಾ ಆಂಟೊನಿ ಸಿಕ್ವೇರ, ಡಾ. ಕ್ಲಾರೆಟ್ ಸಂತೋಷ್ ಡಿಸೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.


