Breaking
26 Jun 2026, Fri

ಆಯುಷ್ಮಾನ್ ಆರೋಗ್ಯ ಕೇಂದ್ರ ಪೆರಾಜೆಗೆ ಕಪಾಟು ಹಸ್ತಾಂತರ

ಬಂಟ್ವಾಳ: ರಾಷ್ಟ್ರೀಯ ಮಾನವ ಹಕ್ಕು ಮತ್ತು ಮಹಿಳಾ, ಮಕ್ಕಳ ಹಾಗೂ ಹಿರಿಯರ ಉನ್ನತೀಕರಣ ಸಂಘಟನೆ, ದಕ್ಷಿಣ ಕನ್ನಡ ಹಾಗೂ ಲಯನ್ಸ್ ಕ್ಲಬ್ ಮಾಣಿ ಇದರ ವತಿಯಿಂದ ಆಯುಷ್ಮಾನ್ ಆರೋಗ್ಯ ಕೇಂದ್ರ ಪೆರಾಜೆ ಕಚೇರಿಗೆ ಸ್ಟೀಲ್ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಸಚ್ಚಿದಾನಂದ ರೈ ಪಾಳ್ಯ ಅವರು ಕಪಾಟನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಮ್ಯುನಿಟಿ ಹೆಲ್ತ್ ಆಫೀಸರ್ ಅಶ್ವಿನಿ ಅವರು ಕಪಾಟನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ, ಸಂಸ್ಥೆಯ ಉಪಾಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಕಾರ್ಯದರ್ಶಿ ಮಂಜುಳಾ ಗೌಡ, ತಾಲೂಕು ಕಾರ್ಯದರ್ಶಿ ರವೀಂದ್ರ ರೈ ಮಂಜೋಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *