Breaking
23 Mar 2026, Mon

ಜ.25 ಮಾಣಿಯಲ್ಲಿ ಹಿಂದೂ ಸಂಗಮ

ಬಂಟ್ವಾಳ: ವಿಟ್ಲದ ಮಾಣಿ ಮಂಡಲ ಸಂಘಟನೆ ವತಿಯಿಂದ ಜ. 25ರಂದು ಮಾಣಿ ಪಟ್ಟಣದಲ್ಲಿರುವ ಸೊಸೈಟಿ ಆವರಣದಲ್ಲಿ “ಹಿಂದೂ ಸಂಗಮ” ನಡೆಯಲಿದೆ ಎಂದು ‌ಹಿಂದೂ ಸಂಗಮ ಆಯೋಜನ ಸಮಿತಿ ವಿಟ್ಲ ಪ್ರಕಟಣೆಯಲ್ಲಿ‌ ತಿಳಿಸಿದೆ.

ನೇರಳಕಟ್ಟೆ ಗಣೇಶ ನಗರದಿಂದ ಅಪರಾಹ್ನ 3 ಗಂಟೆಗೆ ಬೃಹತ್ ಶೋಭಾ ಯಾತ್ರೆ‌ ಹೊರಡಲಿದ್ದು ಬಳಿಕ ಮಾಣಿ ಪೇಟೆಯ ವಿಶಾಲ ಮೈದಾನದಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ‌ ಎಂದು ತಿಳಿಸಿದೆ.

ಅನಂತಾಡಿ, ನೆಟ್ಲ ಮೂಡ್ನೂರು, ಪೆರಾಜೆ, ಮಾಣಿ ಮತ್ತು ಬರಿಮಾರು ಗ್ರಾಮಗಳನ್ನು ಒಳಗೊಂಡಂತೆ ಮಾಣಿ ಮಂಡಲ ವ್ಯಾಪ್ತಿಯ ಮಾತೆಯರು, ವಿವಿಧ ಸಂಘಟನೆಗಳು, ಭಜನಾ ಮಂಡಳಿಗಳು ಹಾಗೂ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಂಡಲ ಮನವಿ ಮಾಡಿದೆ.

Leave a Reply

Your email address will not be published. Required fields are marked *