ಬಂಟ್ವಾಳ: ತಾಲೂಕಿನ ರಾಯಿ ಪೇಟೆಯಲ್ಲಿ ಭಾನುವಾರ ಸಂಜೆ ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮಕ್ಕೆ ಕಣಿಯೂರು ಕನ್ಯಾನ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು.
ಯುವಜನತೆ ಸಂಘಟಿತರಾದಾಗ ದೇಶ ಸದೃಢವಾಗುತ್ತದೆ. ಆ ಮೂಲಕ ಹಿಂದುತ್ವ ಗಟ್ಟಿಯಾಗಿ ಜಾತೀಯತೆ ಮತ್ತು ಮೇಲು-ಕೀಳು ಎಂಬ ಬೇಧಗಳಿಗೆ ಕಡಿವಾಣ ಹಾಕಿದಾಗ ಮಾತ್ರ ಮತಾಂತರ ಮತ್ತಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಕಣಿಯೂರು ಕನ್ಯಾನ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ರಾಯಿ ಶ್ರೀಯಾ ಗಾರ್ಡನ್ ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ರಾಯಿ-ಕೊಯಿಲ-ಅರಳ-ಪಂಜಿಕಲ್ಲು ಗ್ರಾಮ ವ್ಯಾಪ್ತಿಯ ‘ಹಿಂದೂ ಸಂಗಮ’ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಚನ ನೀಡಿದರು.

ಆರ್ ಎಸ್ ಎಸ್ ಭೌತಿಕ್ ಗಜೇಶ್ ಕೆದ್ವ ದಿಕ್ಸೂಚಿಭಾಷಣ ಮಾಡಿ, ‘ ಪರಸ್ಪರ ಸಾಮರಸ್ಯ, ಜಾತಿ ತಾರತಮ್ಯ ನಿವಾರಣೆ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಚಾರ ‘ ಬಗ್ಗೆ ಆರ್ ಎಸ್ ಎಸ್ ಶತಾಬ್ಧಿ ವರ್ಷದಲ್ಲಿ ಜನ ಜಾಗೃತಿ ಮೂಡಿಸುತ್ತಿದೆ ಎಂದರು.

ಸಹ ಭೌತಿಕ್ ಪ್ರಮುಖ್ಮೀನಾಕ್ಷಿ ಗೋಳಿತಬೆಟ್ಟು ಶುಭ ಹಾರೈಸಿದರು.ನಾರಾಯಣ ಭಂಡಾರಿ ಸ್ವಾಗತಿಸಿದರು.ಡೊಂಬಯ ಅರಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.ಇದೇ ವೇಳೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.


