Breaking
26 Jun 2026, Fri

ಖೇತ್ ಬಚಾವೋ ಅಭಿಯಾನ ಅಡಿಯಲ್ಲಿ ನೈಸಗಿಕ ಕ್ರಷಿ ಹಾಗೂ ಸಮತೋಲತ ರಸಗೊಬ್ಬರ ಬಳಕೆ ಕುರಿತು ಕೃಷಿ ಮಾಹಿತಿ ಕಾರ್ಯಾಗಾರ

ಕಲ್ಲಡ್ಕ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಬಂಟ್ವಾಳ ತಾಲೂಕು 2026-27 ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಆತ್ಮ ಯೋಜನೆಯಡಿಯಲ್ಲಿ ಜಿಲ್ಲೆ ಯೊಳಗಿನ ರೈತರಿಗೆ ನೈಸಗಿಕ ಕ್ರಷಿ ಹಾಗೂ ಸಮತೋಲತ ರಸಗೊಬ್ಬರ ಬಳಕೆ ಕುರಿತು ಕೃಷಿ ಮಾಹಿತಿ.ಕಾರ್ಯಾಗಾರ ಕಾರ್ಯಕ್ರಮ ಜೂನ್ 25 ಗುರುವಾರ ವೀರಕಂಭ ಗ್ರಾಮದ ಮಜೊನಿ ಕುಸುಮ ರವೀಂದ್ರ ಶೆಟ್ಟಿಯವರ ಮನೆ ವಠಾರದಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿದ್ದ ಕುಸುಮ ರವೀಂದ್ರ ಶೆಟ್ಟಿ ರೈತರು ಕೃಷಿ ವಿಜ್ಞಾನಿಗಳು ನಿಡುವ ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.


ಸಂಪನ್ಮೂಲ ವ್ಯಕ್ತಿಗಳಾಗಿ ಡಾಕ್ಟರ್ ಮಲ್ಲಿಕಾರ್ಜುನ್ ಮಣ್ಣು ಆರೋಗ್ಯ ವಿಜ್ಞಾನಿ ಕೆವಿಕೆ ಮಂಗಳೂರು ಮಾಹಿತಿ ನೀಡಿ, ಮಣ್ಣು ಉಳಿದರೆ ನಾವು ಉಳಿಯುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಸಮತೋಲಿತ ಗೊಬ್ಬರ ಬಳಕೆ, ರಾಸಾಯನಿಕ ಹೊರೆ ಕಡಿಮೆ,ನೈಸರ್ಗಿಕ ಕೃಷಿಗೆ ಉತ್ತೇಜನೆ,ವಿಷಮುಕ್ತ ಆಹಾರ, ಜಲ- ಪರಿಸರ ಸಂರಕ್ಷಣೆ ಮಾಡುವ ಮುಖೇನ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕು ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.


ಡಾ. ದರ್ಣೇಶ್, ಹೈನುಗಾರಿಕಾ ವಿಜ್ಞಾನಿ ಕೆವಿಕೆ ಮಂಗಳೂರು ಸಾವಯುವ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕೃಷಿ ಇಲಾಖೆ ಬಂಟ್ವಾಳ ತಾಲೂಕು ವಿಟ್ಲ ಹೋಬಳಿಯ ಆತ್ಮ ಯೋಜನೆಯ ತಾಂತ್ರಿಕ ಸಹಾಯಕರಾದ ವಿರೂಪಾಕ್ಷ ಹಡುಪದ್ ರವರು ಕೃಷಿ ಇಲಾಖೆಯ ಮಾಹಿತಿ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಶರ್ಮ, ಪ್ರಗತಿಪರ ಕೃಷಿಕರಾದ ತಿರುಮಲ ಕುಮಾರ್ ಮಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೋಳಂತೂರ್ ಮತ್ತು ಪೆರುವಾಯಿ ಕೃಷಿ ಸಖಿ ಹಾಗೂ ಪಶು ಸಖಿಯರು ಹಾಗೂ ವೀರಕಂಭ ಗ್ರಾಮದ ಸ್ನೇಹ ಸಂಜೀವಿನಿ ಸಿಬ್ಬಂದಿಗಳಾದ ರೂಪ, ಜಯಂತಿ, ಪ್ರಚೀನ ಉಪಸ್ಥಿತರಿದ್ದರು, ರೈತರು ತಮ್ಮ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳಲ್ಲಿ ಅನುಭವಗಳನ್ನು ಹಂಚಿಕೊಂಡರು ರೈತರಿಗೆ ಮಣ್ಣು ಪರೀಕ್ಷೆ ಮಾಡಿದ ಮಣ್ಣು ಕಾರ್ಡ್ ವಿತರಿಸಲಾಯಿತು.

ಕೆಲಿಂಜ ಶಾಖೆಯ ಯೋಗ ಶಿಕ್ಷಕರಾದ ಬಾಬಾ ಕಿರಣ್ ಪ್ರಾರ್ಥಿಸಿ, ಎನ್ ಆರ್ ಎಲ್ ಎಂ ವೀರಕಂಭ ಗ್ರಾಮದ ಎಂ ಬಿ ಕೆ ಮಲ್ಲಿಕಾ ಶೆಟ್ಟಿ ಸ್ವಾಗತಿಸಿ,ವೀರಕಂಭ ಗ್ರಾಮದ ಕೃಷಿ ಸಖಿ ನಮಿತಾ ರೈ ವಂದಿಸಿದರು.ವೀರಕಂಭ ಗ್ರಾಮದ ಸಿ ಆರ್ ಪಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *