Breaking
11 Aug 2026, Tue

ನಾಗನ ವಳಚಿಲ್ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ಸರ್ಪಸಂಸ್ಕಾರ

ಬಂಟ್ವಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗನ ವಳಚಿಲ್, ಸಜೀಪ ಮುನ್ನೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಸರ್ಪಸಂಸ್ಕಾರ, ಶ್ರೀ ಆಶ್ಲೇಷ ಬಲಿ ಪೂಜೆ, ವಟು ಆರಾಧನೆ ಹಾಗೂ ಅನ್ನದಾನ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಕಾರ್ಯಕ್ರಮವು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ನೆರವೇರಿತು. ದೇವಸ್ಥಾನದ ಅರ್ಚಕ ವಿಶ್ವನಾಥ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಂಜಿತ್ ರಾವ್, ಸಂದೀಪ್ ಕುಮಾರ್, ಪ್ರಕಾಶ್, ಪುರುಷೋತ್ತಮ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *