ಮಂಗಳೂರು: ಶ್ರೀ ಅಯ್ಯಪ್ಪ ಭಕ್ತ ವೃಂದ ಗುರುಕುಮೇರ್, ಕಂದಾವರಪದವು ಗುರುಪುರ-ಕೈಕಂಬ ಇವರ ವತಿಯಿಂದ ದಿನಾಂಕ 29/12/2024ರ ಆದಿತ್ಯವಾರ ಶ್ರೀ ಉದಯ ಗುರುಸ್ವಾಮಿ, ಮಂಜೇಶ್ವರ ಇವರ ನೇತೃತ್ವದಲ್ಲಿ ಗುರುವಂದನಾ, ಸಹಸ್ರ ತುಪ್ಪದ ದೀಪೋತ್ಸವ, ಅಪ್ಪಸೇವೆ ಹಾಗೂ ಕೆಂಡಸೇವೆ ಕಾರ್ಯಕ್ರಮವು ನಡೆಯಲಿದೆ.
ಅದೇ ದಿನ ರಾತ್ರಿ 12.15ಕ್ಕೆ ಸರಿಯಾಗಿ ವಿಧಾತ್ರೀ ಕಲಾವಿದೆರ್ ಕೈಕಂಬ (ರಿ ) ಇವರ ಅದ್ದೂರಿ ರಂಗ ವಿನ್ಯಾಸದೊಂದಿಗೆ ವಿಭಿನ್ನ ಶೈಲಿಯಲ್ಲಿ ‘ದೈವರಾಜ ಶ್ರೀ ಬಬ್ಬು ಸ್ವಾಮಿ ‘ಎಂಬ ನಾಟಕ ಪ್ರದರ್ಶನಗೊಳ್ಳಲಿದೆ, ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಉಪಸ್ಥಿತರಿದ್ದು ಸ್ವಾಮಿಯ ಪೂರ್ಣನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಅಯ್ಯಪ್ಪ ಭಕ್ತ ವೃಂದ ಅಪೇಕ್ಷಿಸಿದೆ.