ಪುಂಜಾಲಕಟ್ಟೆ : ಕಲಾಭೂಮಿ ಪ್ರತಿಷ್ಠಾನ ರಿ. ಬೆಂಗಳೂರು ಇದರ ವತಿಯಿಂದ ಇದೇ ನವೆಂಬರ್ 29ರಂದು ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ , ಜನಪದ ಮತ್ತು ಜನಪದ ಸೇವೆಯಲ್ಲಿ ಗುರುತಿಸಿ ನೀಡಲ್ಪಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನುಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾನ್ವಿ ಪೂಜಾರಿ ಮಡಂತ್ಯಾರು ಇವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಲಾಭೂಮಿ ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.