ಮಂಗಳೂರು: ಶ್ರೀ ರಾಮಾಂಜನೇಯ ಭಜನಾ ಮಂದಿರ(ರಿ) ಮಳಲಿ ಇದರ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ನವೆಂಬರ್ 24 ಆದಿತ್ಯವಾರದಂದು ಕಟ್ಟೆಮಾರ್ ಗದ್ದೆಯಲ್ಲಿ “ಕೆಸರ್ದ ಗೊಬ್ಬು” ಕಾರ್ಯಕ್ರಮವು ನಡೆಯಲಿದೆ.
ಅಷ್ಟೇ ಅಲ್ಲದೆ ಫೆಬ್ರವರಿ 02 2025ರಂದು ಸಂಜೆ 4 ಗಂಟೆಗೆ ಮಳಲಿ ವೆಂಕಟರಮಣ ದೇವಸ್ಥಾನದಿಂದ ಹೊರಟು ಮಳಲಿ ಪೇಟೆಯಾಗಿ ಭಜನಾ ಮಂದಿರದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ, ಜೊತೆಗೆ ಅದೇ ದಿನ ಭಕ್ತಾದಿಗಳಿಂದ ಶ್ರೀ ರಾಮಾಂಜನೇಯ ದೇವರ ಬೆಳ್ಳಿಯ ಭಾವಚಿತ್ರ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಇನ್ನು ಅಮೃತ ಮಹೋತ್ಸವದ ಪ್ರಯುಕ್ತ ದಿನಾಂಕ 06/02/2025 ರ ಬೆಳಿಗ್ಗೆ 6ಗಂಟೆಯಿಂದ 9/02/2025ರ ಆದಿತ್ಯವಾರ ಬೆಳಿಗ್ಗೆ 6ಗಂಟೆಯವರೆಗೆ ಮೂರು ದಿನಗಳ ‘ಅಖಂಡಾ ಭಜನಾ ಮಂಗಲೋತ್ಸವ’ ನಡೆಯಲಿದೆ. ಅದೇ ದಿನ ಸಂಜೆ 6:30ರಿಂದ ರಾತ್ರಿ 8 ಗಂಟೆಯವರೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 8ರಿಂದ 9:30ರವರೆಗೆ ಸಭಾಕಾರ್ಯಕ್ರಮ ಹಾಗೂ 9:30ರಿಂದ ತುಳು ಪೌರಾಣಿಕ ನಾಟಕ ‘ಪೊರಿಪುದಪ್ಪೆ ಜಲದುರ್ಗೆ’ ನಡೆಯಲಿದೆ.