ಮಂಗಳೂರು: ತಾಲೂಕಿನ ಪ್ರಸಿದ್ದ ಕಾರಣಿಕ ದೈವ ಕ್ಷೇತ್ರಗಳಲ್ಲಿ ಒಂದಾಗಿರುವ, ಬಲವಂಡಿ ಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ,ಶ್ರೀ ಕ್ಷೇತ್ರ ಪೆರಾರದಲ್ಲಿ ಇಂದು ಬಂಟಕಂಬ ರಾಜಾಂಗಣ ಛತ್ರಧರಸು ಛಾವಡಿ ಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬಂಟಕಂಬಕ್ಕೆ ಕಲಶಾಭೀಶೇಕ ಜರಗಿತು. ದೈವಗಳ ಜೋಗ ಅಂದರೆ ದರ್ಶನ ಸೇವೆ ಆದ ಬಳಿಕ ಪ್ರಸಾದ ವಿತರಣೆ ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಯು ಜರಗಿತು.
ಈ ಸಂದರ್ಭದಲ್ಲಿ ಕ್ಷೇತ್ರ ದ ಪೆರ್ಗಡೇ ಯವರಾದ ಶ್ರೀ ಗಂಗಾಧರ ರೈ ಯವರು, ಮದ್ಯಾಸ್ತ ರಾದ ಶ್ರೀ ಪ್ರತಾಪಚಂದ್ರ ಶೆಟ್ಟಿ, ಬಲವಂಡಿ ದೈವದ ಮುಕ್ಕಲ್ದಿಗಳು ಅದ ಶ್ರೀ ಬಾಲಕೃಷ್ಣ ಶೆಟ್ಟಿ ಅಳಿಕೆಗುತ್ತು, ಪಿಲಿಚಂಡಿ ದೈವದ ಮುಕ್ಕಲ್ದಿಗಳು, ಗುತ್ತು ಮನೆತನದವರು, ದೈವ ಚಾಕಿರಿಯವರು, ಊರಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಉಪಸ್ಥಿತರಿದ್ದರು.