ಬಂಟ್ವಾಳ: ತಾಲೂಕಿನ ದ. ಕ. ಜಿ. ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ – ನಲ್ಕೆಮಾರ್, ಅಮ್ಟಾಡಿ ಗ್ರಾಮ, ಮೊಡಂಕಾಪು ಇಲ್ಲಿನ ಶೈಕ್ಷಣಿಕ ವರ್ಷ 2024 – 2025 ರ ಶಾಲಾ ವಾರ್ಷಿಕೋತ್ಸವವು 06ನೇ ಡಿಸೆಂಬರ್ 2024 ಶುಕ್ರವಾರ ನಡೆಯಲಿದೆ.
ಬೆಳಿಗ್ಗೆ ಗಂಟೆ 9.30ಕ್ಕೆ ಉದ್ಘಾಟನ ಸಮಾರಂಭದಲ್ಲಿ ಶ್ರೀ ಬಸ್ತಿ ಮಾಧವ ಶೆಣೈ ಬಿ. ಸಿ ರೋಡ್ ಇವರಿಂದ ಧ್ವಜಾರೋಹಣ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಮೋಹಿನಿ ಹಾಗೂ ಶಾಲಾ ವಿದ್ಯಾಭಿವೃದ್ಧಿ ಸಮಿತಿಯ ಶ್ರೀ ಯೋಗೀಶ್ ಸುವರ್ಣ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಸಂಜೆ ಗಂಟೆ 5.00ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ನಡೆಯಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.