Breaking
13 May 2026, Wed

ಮನೆಯೊಂದರಲ್ಲಿ 5 ಲಕ್ಷ ರೂ ಕಳವು: ಪ್ರಕರಣ ದಾಖಲು

ಮಂಗಳೂರು: ನಗರದ ಬಿಜೈ ನ್ಯೂ ರೋಡ್‌ನ ಪಾಯಸ್‌ ಗಾರ್ಡನ್‌ನಲ್ಲಿರುವ ಮನೆಯೊಂದರ ಕಪಾಟಿನಲ್ಲಿರಿಸಿದ್ದ 5 ಲಕ್ಷ ರೂ. ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

ಮನೆ ಮಾಲಕರು ಬಿಜೈ ಕೆಎಸ್ಸಾರ್ಟಿಸಿ ಬಳಿ ಜೋಳದ ರೊಟ್ಟಿ ಊಟದ ಹೊಟೇಲ್‌ ನಡೆಸುತ್ತಿದ್ದು, ವ್ಯಾಪಾರಕ್ಕೆ ಸಂಬಂಧಿಸಿದ ಹಣವನ್ನು ಮನೆಯ ಕಪಾಟಿನಲ್ಲಿ ಇರಿಸಿದ್ದರು. ಬಳಿಕ ಹೊಟೇಲ್ ಬಂದ್ ಮಾಡಿ ಮನೆಗೆ ಹೋಗಿ ಕಪಾಟು ತೆರೆದಾಗ ಹಣ ಇರಲಿಲ್ಲ. ಕೆಲಸದವರು ಅಥವಾ ಇನ್ಯಾರೋ ಮನೆಯೊಳಗೆ ಬಂದು ಕಳವುಗೈದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *