ಬೆಳ್ತಂಗಡಿ: ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆಯಾದ ಸುಮಂತ್ ಮನೆಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಜ.17 ರಂದು ಭೇಟಿ ನೀಡಿದರು.

ಮನೆಮಂದಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದು ಬಳಿಕ ಸಾಂತ್ವನ ಹೇಳಿದರು. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಸಂಸದರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಜೊತೆ ಮಾತಾನಾಡಿರುವುದಾಗಿ ಮಾಹಿತಿ ನೀಡಿದರು.

ಈ ಸಂದರ್ಭ ಬಿಜೆಪಿಯ ಜಯಂತ್ ಕೋಟ್ಯಾನ್, ನಿತೇಶ್, ದಿನಕರ್, ವಸಂತ್ ಮಜಲ್, ವಿಜಯ ಕುಮಾರ್, ಲಕ್ಷ್ಮೀಕಾಂತ್, ಶಶಿರಾಜ್ ಶೆಟ್ಟಿ, ವಿನೀತ್ ಕೋಟ್ಯಾನ್ ಉಪಸ್ಥಿತರಿದ್ದರು.



