Breaking
22 Mar 2026, Sun

ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಟ್ರಸ್ಟ್ ವಾರ್ಷಿಕ ಸಭೆ: ಲೆಕ್ಕಪತ್ರ ಮಂಡನೆ ಹಾಗೂ ಅಕ್ಕಿ ವಿತರಣೆ

ಬಂಟ್ವಾಳ: ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಟ್ರಸ್ಟ್ (ರಿ.) ಮಂಚಕಲ್ಲುವಿನಲ್ಲಿ ಈ ವರ್ಷದ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಹಾಗೂ ವಾರ್ಷಿಕ ಸೇವಾ ಚಟುವಟಿಕೆ ಬಗ್ಗೆ ಸಮಗ್ರವಾಗಿ ಸಭೆ ನಡೆಯಿತು.

ಸಭೆಯಲ್ಲಿ ಕಾರ್ಯಕ್ರಮ ನಡೆಸಲು ಸಹಕರಿಸಿದ ಎಲ್ಲಾ ಮಾಲಧಾರಿಗಳಿಗೂ, ಧಾನಿಗಳಿಗೂ ಟ್ರಸ್ಟಿಗಲಿಗೂ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ಈ ವರ್ಷದ ಲೆಕ್ಕ ಪತ್ರ ಮಂಡಿಸಿ ಶಿಬಿರದ ಕೆಲವೊಂದು ಬಾಕಿ ಕೆಲಸಗಳನ್ನ ಮಾಡುವುದಾಗಿ ಮತ್ತು ಮೂರು ಬಡ ಕುಟುಂಬಕ್ಕೆ ಅಕ್ಕಿ ವಿತರಿಸುವುದಾಗಿ ನಿರ್ಣಯಿಸಲಾಯಿತು. ಅದರಂತೆಯೇ ಮಂಚಕಲ್ಲುವಿನ ರವಿ ಗೌಡರವರಿಗೆ, ಮೇಲುಗುಡ್ಡೆಯ ಸುಂದರಿಯವರಿಗೆ, ಹಾಗೂ ಸಂಗಬೆಟ್ಟು ಜಂಕಲ ಮನೆಯ ಚಂದ್ರಹಾಸರವರಿಗೆ ಈ ವರ್ಷದ ಸೇವಾ ರೂಪದಲ್ಲಿ ಅಕ್ಕಿ ವಿತರಿಸಲಾಯಿತು.

ಸಭೆಯಲ್ಲಿ ಎಲ್ಲಾ ಟ್ರಸ್ಟಿಗಳು ಪದಾಧಿಕಾರಿಗಳು ಅಯ್ಯಪ್ಪ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.

ಮಂಚಕಲ್ಲು ಅಯ್ಯಪ್ಪ ಮಂದಿರದಲ್ಲಿ ಪ್ರತೀ ಸಂಕ್ರಮಣದಂದು ಸಂಜೆ 1 ಗಂಟೆಯ ಭಜನಾ ಸೇವೆ ಹಾಗೂ ಪೂಜೆ ಇರುವುದರಿಂದ ಭಜನಶಕ್ತರು ಬಂದು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *