Breaking
26 Sep 2026, Sat

ಸ್ಕೂಟರ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಕಿರಣ್ ಬಿ.ಎನ್.(32) ಹಾಗೂ ಶಿವಮೊಗ್ಗ ದುರನಮಲ್ಲಿ ನಿವಾಸಿ ಯೋಗೇಶ ನಾಯ್ಕ ಎನ್. (22) ಎಂದು ಗುರುತಿಸಲಾಗಿದೆ.

2025ರ ಆ.30ರಂದು ಹೆರ್ಗಾ ಗ್ರಾಮದ ಪ್ರದೀಪ್ ಸಾಲ್ಯಾನ್ ಅವರು ಮಣಿಪಾಲ ಕಾಯಿನ್ ಸರ್ಕಲ್ ಬಳಿ ಸ್ಕೂಟರ್‌ ಅನ್ನು ನಿಲ್ಲಿಸಿದ್ದರು. ಬಳಿಕ ಬೆಳಿಗ್ಗೆ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಜ.7ರಂದು ಆರೋಪಿ ಗಳನ್ನು ಬಂಧಿಸಿ, ಕಳುವಾದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.

ಆರೋಪಿ ಕಿರಣ್ ಬಿ.ಎನ್. ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *