Breaking
23 Mar 2026, Mon

ಫೆ. 01: ಸಜೀಪ ಮಂಡಲದ ಸಜೀಪ ಮೂಡ–ಸಜೀಪ ಮುನ್ನೂರು ಗ್ರಾಮಗಳ ಹಿಂದೂ ಸಂಗಮ ಅಂಗವಾಗಿ ಭವ್ಯ ಶೋಭಾಯಾತ್ರೆ ಹಾಗೂ ಸಂಗಮ ಧರ್ಮಸಭೆ

ಬಂಟ್ವಾಳ: ಸಜೀಪ ಮಂಡಲದ ಸಜೀಪ ಮೂಡ ಹಾಗೂ ಸಜೀಪ ಮುನ್ನುರು ಗ್ರಾಮಗಳ ಹಿಂದೂ ಸಂಗಮ ಅಂಗವಾಗಿ ಭವ್ಯ ಶೋಭಾಯಾತ್ರೆ ಮತ್ತು ಸಂಗಮ ಧರ್ಮಸಭೆಯು ಫೆ. 01 ರಂದು ಸಂಜೆ 4:00 ಗಂಟೆಗೆ ಬೆಂಕ್ಯಾ -ಸುಭಾಷ್ ನಗರ ಸಜೀಪ ಮೂಡದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರವನ್ನು ಸಜೀಪ ಮಾಗಣೆ ಶ್ರೀ ಉಳ್ಳಾಲ್ತಿ ಕ್ಷೇತ್ರ ಸಂಕೇಶ ಭಂಡಾರ ಮನೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಬಿಡುಗಡೆಗೊಳಿಸಿದರು.

ಈ ಸಭೆಯು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಶ್ರೀ ಗುರುದೇವ ದತ್ತ ಸಂಸ್ಥಾನಂ ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಗಾಪುರ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕಾಂತಾಡಿ, ಗುತ್ತುಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಎಸ್, ರವೀಂದ್ರ ಕಂಬಳಿ, ಜಯ ಶಂಕರ ಬಾಸ್ರೀ ತಾಯ, ಕೆ ಕೃಷ್ಣ ಭಟ್, ರಮೇಶ್ ಕುಲಾಲ್, ಗಿರೀಶ್ ಕುಮಾರ್, ರವಿಶಂಕರ್ ಶೆಟ್ಟಿ, ಶೈಲೇಶ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *