Breaking
24 Jun 2026, Wed

ಹೆಜಮಾಡಿಯ ಅಮಾವಾಸ್ಯೆಕರಿಯ ಕಡಲ ಕಿನಾರೆಯಲ್ಲಿ ಭೂತಾಯಿ ಮೀನುಗಳ ಸುಗ್ಗಿ

ಪಡುಬಿದ್ರಿ: ಹೆಜಮಾಡಿಯ ಅಮಾವಾಸ್ಯೆಕರಿಯ ಕಡಲ ಕಿನಾರೆಯಲ್ಲಿ ಜ. 12ರ ಸಂಜೆ ವೇಳೆ ಭೂತಾಯಿ ಮೀನುಗಳ ಸುಗ್ಗಿಯಾಗಿದೆ.

ವೀರಾಂಜನೇಯ ಕೈರಂಪಣಿ ಫಂಡ್ ನ ಸದಸ್ಯರು ಸಮುದ್ರಕ್ಕೆ ಹಾಕಿದ ಬಲೆಗಳನ್ನು ದಡಕ್ಕೆಳೆಯುವಂತೆಯೆ 20 ಟನ್‌ಗಳಷ್ಟು ಭೂತಾಯಿ ಮೀನು ಸಿಕ್ಕಿದ್ದು ,ಬಲೆಯಿಂದ ಓವರ್‌ಫ್ಲೋ ಆಗಿ ನೀರ ರಭಸಕ್ಕೆ ಸಿಲುಕಿ ತೀರ ಸೇರಿದ ಸಣ್ಣ ಭೂತಾಯಿ ಮೀನುಗಳು ಇತರರ ಜೇಬುಗಳನ್ನೂ ಭರ್ತಿ ಮಾಡಿವೆ.

ಕೆಲವರು ರುಚಿಯಾದ ಮನೆಯೂಟಕ್ಕಾಗಲಿ ಎಂದು ಒಯ್ದವರಿದ್ದಾರೆ. ಹಲವರು ಇಲ್ಲೇ ಮೀನಿನ ವ್ಯಾಪಾರ ಕುದುರಿಸಿದ್ದಾರೆ. ಫಿಶ್‌ಮಿಲ್‌ಗಳಿಗೂ ಇಲ್ಲಿಂದ ಟನ್‌ಗಟ್ಟಲೆ ಮೀನುಗಳ ರವಾನೆಯಾಗಿದೆ.

Leave a Reply

Your email address will not be published. Required fields are marked *