Breaking
22 Mar 2026, Sun

ಮಂಗಳೂರು: ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಕೊಳವೂರು ಗ್ರಾಮದ ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 20ರಿಂದ 26ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಜ.12ರಂದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ.

ತಂತ್ರಿಗಳಾದ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಾಸ್ರಿತ್ತಾಯ ಮತ್ತು ಶ್ರೀ ಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಮಯ್ಯರವರ ಉಪಸ್ಥಿತಿಯಲ್ಲಿ, ದೇವಸ್ಥಾನದ ವಠಾರದಲ್ಲೇ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ, ನಿಟ್ಟೆಗುತ್ತು ಎಂ.ಎನ್ ಅಡ್ಯಂತಾಯ ಅವರು , ದೇವರ ಅನುಗ್ರಹದಿಂದ ಬ್ರಹ್ಮಕಲಶ ನಡೆಸುವ ಪುಣ್ಯ ನಮಗೆ ಒದಗಿ ಬಂದಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲಾರೂ ಭೇಧವಿಲ್ಲದೆ ಒಗ್ಗಟ್ಟಾಗಿ ಭಾಗಿಯಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ್ ಶೆಟ್ಟಿ ನಾರ್ಯ ನಡಿಗುತ್ತು, ಉಪಾಧ್ಯಕ್ಷ ಸಂತೋಷ್ ರೈ ಮಾಣಿಬೆಟ್ಟುಗುತ್ತು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹರಿಯಪ್ಪ ಮುತ್ತೂರು, ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಜಗದೀಶ್ ಆಳ್ವ ಅಗ್ಗೊಂಡೆ, ಹಿರಿಯರಾದ ಶರತ್ ಕುಮಾರ್ ಶೆಟ್ಟಿ, ಮುತ್ತೂರು ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ, ಸದಸ್ಯರಾದ ಜಗದೀಶ್ ದುರ್ಗಾ ಕೋಡಿ, ಸಂತೋಷ್ ಆಳ್ವ ಕಂಗಿನಡಿ, ಗ್ರಾಮದ ಸಂಘ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸದಸ್ಯರು, ಗ್ರಾಮದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಮೇಗಿನ ಮನೆ ಪ್ರಾಸ್ತಾವಿಕ ಮಾತನಾಡಿ, ವಿಶ್ವನಾಥ ಪಂಜ ದೇವರ ಸ್ತುತಿ ಪಠಿಸಿದರು, ದುಗ್ಗಪ್ಪ ಬಂಗೇರ ವಂದಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *