Breaking
22 Mar 2026, Sun

ಬಾಳ್ತಿಲ ಆದಿನಾಥ ಜಿನ ಮಂದಿರದ ಆವರಣದಲ್ಲಿ ಜೈನ್ ಮಿಲನ್ ಮಾಸಿಕ ಸಭೆ

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆಯು ಜ. 11 ರಂದು ಬಾಳ್ತಿಲ ಆದಿನಾಥ ಜಿನ ಮಂದಿರದ ಆವರಣದಲ್ಲಿ ಬ್ರಿಜೇಶ್ ಜೈನ್ ಮತ್ತು ಕುಟುಂಬಿಕರ ನೇತೃತ್ವದಲ್ಲಿ ಜರಗಿತು.

ವಿಶೇಷವಾಗಿ ವೀರ‌ ರಾಣಿ ಅಬ್ಬಕ್ಕ ದೇವಿಯ 500ನೇ ಜನ್ಮ ದಿನಾಚರಣೆಯ ಸಂಸ್ಮರಣ ದಿನದ ವಿಶೇಷ ಸಭೆಯನ್ನು ಏರ್ಪಡಿಸಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ಮಿಲನ್ ಅಧ್ಯಕ್ಷರಾದ ವೀರ್ ರಾಜೇಂದ್ರ ಜೈನ್ ವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಂಟವಾಳ ಮಿಲನ್ ಒಟ್ಟು ಒಂಬತ್ತು ಹಿರಿಯ ಕಿರಿಯ ತಂಡಗಳು ಜಿನ ಭಜನೆಯನ್ನು ಹಾಡುವುದರ ಮೂಲಕ ಭಜನಾ ಸಂಕೀರ್ತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಜಿನ ಭಜನೆಯನ್ನು ಶಕುಂತಲಾ ಪಿ ಜೈನ್ ಅಕಲಂಕ ಮೂಡಬಿದ್ರೆ ಅವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಜಿನರಾಜ್ ಅತಿಕಾರಿ ಕೋರ್ಯ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ರಾಣಿ ಅಬ್ಬಕ್ಕ ದೇವಿಯ 500 ನೆ ಜನ್ಮ ದಿನಾಚರಣೆ ಸಂಸ್ಮರಣ ಅಂಗವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಡಾಕ್ಟರ್ ತುಕಾರಾಮ ಪೂಜಾರಿ ನಿವೃತ್ತ ಪ್ರಾಚಾರ್ಯರು ಮತ್ತು ನಿರ್ದೇಶಕರು ರಾಣಿ ಅಬ್ಬಕ್ಕತುಳು ಅಧ್ಯಯನ ಕೇಂದ್ರ ಬಿಸಿ ರೋಡು ಅವರು ಅಬ್ಬಕ್ಕ ದೇವಿಯ ದೇಶಪ್ರೇಮ ಜನರ ಯೋಗ ಕ್ಷೇಮದ ಬಗ್ಗೆ ಇದ್ದ ಕಾಳಜಿ ಮತ್ತು ನೆಲದ ಬಗ್ಗೆ ಇದ್ದ ಪ್ರೀತಿ ಅಭಿಮಾನದ ಬಗ್ಗೆ ತಿಳಿಸುತ್ತಾ ಜನರು ಇಂತಹ ಪ್ರಾತಸ್ಮರಣೆಯನ್ನು ಯಾಕೆ ಈ ದಿನದಲ್ಲಿ ನೆನೆಸಬಾರದು ಎಂದು ಅರ್ಥವತ್ತಾಗಿ ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ ಉಪಾಧ್ಯಕ್ಷರಾದ ವೀರ ಸುದರ್ಶನ್ ಜೈನ್ ಮಾತನಾಡಿ ಬಿ.ಸಿ.ರೋಡು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸ್ಥಾಪಿಸಿದ ತುಕಾರಾಮ ಪೂಜಾರಿ ಇವರ ಸಾಮಾಜಿಕ ಕಳಕಳಿ ಬಗ್ಗೆ ತಿಳಿಸಿದರು.

ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಸತೀಶ್ ಪಡಿವಾಳ್ ಮತ್ತು ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ನಿರ್ದೇಶಕರು ವೀರ್ ಪ್ರಮೋದ್ ಅವರು ಮಾತನಾಡಿದರು.

ಸಂಸ್ಮರಣ ಕಾರ್ಯಕ್ರಮವನ್ನು ವಿಭಾಗ ಮಟ್ಟದ ಕಾರ್ಯದರ್ಶಿ ಸುಭಾಷ್ ಚಂದ್ರ ನಿರ್ವಹಿಸಿದರೆ, ಭಜನಾ ಕಮ್ಮಟವನ್ನು ವೀರಾಂಗನೆ ಚಂದನ ಬ್ರಿಜೇಶ್ ವಹಿಸಿದ್ದರು. ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಆತಿಥೇಯರಾದ ಬಾಳ್ತಿಲ ಬೀಡು ಬ್ರಿಜೇಶ್ ಜೈನ್ ಇವರು ನೆರವೇರಿಸಿದರು.

ಹಿಂದಿನ ತಿಂಗಳ ಮಾಸಿಕ ವರದಿ ಮಿಲನ್ ಕಾರ್ಯದರ್ಶಿ ಜಯ ಕೀರ್ತಿ ಮಂಡಿಸಿದರು. ಕಾರ್ಯಕ್ರಮವನ್ನು ಸುಶ್ಮಾ ಜೈನ್ ನಿರೂಪಿಸಿದರು . ಪದ್ಮ ಕಾಂತಿ ಮತ್ತು ಸಂಗಡಿಗರು ಶಾಂತಿಮಂತ್ರ ದಿಂದ ಕಾರ್ಯಕ್ರಮವು ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *