ಮೂಡುಬಿದಿರೆ : ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ದಿನಾಂಕ 16/11/2024 ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪುರಸ್ಕೃತರಾಗಿರುವ ಮೂಡಬಿದಿರೆಯ ವೃತ್ತ ನಿರೀಕ್ಷಿಕರಾಗಿರುವಂತಹ ಶ್ರೀಯುತ ಸಂದೇಶ್ ಪಿ. ಜಿ ಯವರು ” ಶಿಕ್ಷಣ ಸಂಸ್ಥೆಯು ನಿಮ್ಮೆಲ್ಲರ ಶ್ರಮದಿಂದ ಉನ್ನತ ಸ್ಥಾನಕ್ಕೆ ತಲುಪಿದೆ. ಇದು ನಮಗೆಲ್ಲ ಖುಷಿ ನೀಡುವ ಸಂಗತಿ. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಕಾಪಾಡಲು ಸಾಧ್ಯ. ಜೊತೆಗೆ ಸಹೋದರತೆಯ ಭಾವನೆಯನ್ನು ಮೂಡಿಸಿ ಸಾಮರಸ್ಯದ ಬದುಕನ್ನು ಕಂಡು ಕೊಳ್ಳಲು ಸಾಧ್ಯ. ಗೆದ್ದರೆ ಬೀಗದೆ, ಸೋತರೆ ಕುಗ್ಗದೆ ಕ್ರೀಡಾ ಸ್ಪೂರ್ತಿಯೊಂದಿಗೆ ಪಾಲ್ಗೊಳ್ಳಿ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಎನ್ ವೆಂಕಟೇಶ್ ನಾಯಕ್ ರವರು ” ವಿದ್ಯಾರ್ಥಿಗಳು ಉನ್ನತ ಹುದ್ದೆಗಳಿಗೆ ಸಾಗುವ ಹಂಬಲದಿಂದ ನಮ್ಮ ಸಂಸ್ಥೆಯಲ್ಲಿ ಸೇರಿ ಕೊಂಡಿದ್ದೀರಿ ; ಆದರೆ ಶಿಕ್ಷಣದ ಜೊತೆಗೆ ಕ್ರೀಡೆಯು ಅತೀ ಮುಖ್ಯವಾದದ್ದು. ಕ್ರೀಡೆಯೆಂದರೆ ವಿದ್ಯಾರ್ಥಿಗಳಿಗೆ ಸೋಲನ್ನು ಸ್ವೀಕರಿಸುವ ಶಕ್ತಿಯನ್ನು ತುಂಬುತ್ತದೆ. ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಕಾರ್ಯವನ್ನ ಮಾಡುತ್ತದೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡೆಯು ಮುಖ್ಯ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಪ್ರತಿಜ್ನ್ಯಾ ವಿಧಿಯನ್ನು ವಿದ್ಯಾರ್ಥಿ ಕಿಶನ್ ಬೋದಿಸಿದರು.
ಪಥ ಸಂಚಲನದಲ್ಲಿ ಪ್ರಥಮ ಪಿ.ಯು. ಸಿ. ಯ C-3 ತಂಡವು ಪ್ರಥಮ ಸ್ಥಾನವನ್ನು ಪಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕರುಮತ್ತು ಟ್ರಸ್ಟಿಗಳಾಗಿರುವ ಶ್ರೀಯುತ ಸುಭಾಷ್ ಝ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೇಕರ್, ಮೊಹಮ್ಮದ್ ಭಾಶಾ, ಮತ್ತು ಶರತ್ ಗೋರೆ ರವರು ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿಗಳಾಗಿರುವ ಅರುಣ್ ಡಿ ಸಿಲ್ವರವರು ಸ್ವಾಗತಿಸಿದರು. ಕಾಲೇಜಿನ ಉಪಾಪ್ರಾಂಶುಪಾಲರಾಗಿರುವಂತಹ ಡಾ. ರಶ್ಮಿ ರಾಜೇ ಅರಸ್ ರವರು ಧನ್ಯವಾದ ಸಮರ್ಪಣೆಯನ್ನು ಸಲ್ಲಿಸಿದರು. ಉಪನ್ಯಾಸಕರುಗಳಾದ ಅರುಣ್ ಕೋಟ್ಯಾನ್, ನಿಕೇತ್ ಮೋಹನ್ ದಾಸ್ ಶೆಟ್ಟಿ ಮತ್ತು ಸೋಮನಿಂಗ ರೇ ರವರು ಕಾರ್ಯಕ್ರಮವನ್ನು ನಿರೂಪಿಸಿದರು.