Breaking
9 Jul 2025, Wed

ಮಗುವಿನ ಚಿಕಿತ್ಸೆ ವೆಚ್ಚದ ಸಹಾಯಕ್ಕೆ ಸ್ಪಂದಿಸಿದ ವೀರ ವಿಕ್ರಮ ಸಿದ್ದಕಟ್ಟೆ -ಕೊಡಂಗೆ ಕಂಬಳ ಸಮಿತಿ

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಕಂದಮ್ಮ ಮನಸ್ವಿನಿಳಿಗೆ ಅರೋಗ್ಯದಲ್ಲಿ ಬ್ಲಡ್ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಪುಟ್ಟ ಮಗು ಗುಣಮುಖವಾಗಲು ಹೆಚ್ಚಿನ ಚಿಕಿತ್ಸೆ ಅತ್ಯಾವಶ್ಯಕವಾಗಿದ್ದು, ಬೆಂಗಳೂರು ಏನ್. ಎಸ್. ನಾರಾಯಣ ಆಸ್ಪತ್ರೆಯ ಚಿಕಿತ್ಸೆ ವೆಚ್ಚಕ್ಕಾಗಿ ಮಗುವಿನ ಪೋಷಕರು ಸರ್ವರಲ್ಲಿಯೂ ವಿನಂತಿ ಮಾಡಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವದನ್ನು ಗಮನಸಿದ ಶ್ರೀವೀರ -ವಿಕ್ರಮ ಜೋಡುಕರೆ ಕಂಬಳ ಸಮಿತಿ, ಸಿದ್ದಕಟ್ಟೆ -ಕೊಡಂಗೆ ಇದರ ಪದಾಧಿಕಾರಿಗಳು ತಕ್ಷಣವೇ ಸ್ಪಂದಿಸಿ ಮಗುವಿನ ಕುಟುಂಬವನ್ನೂ ಸಂಪರ್ಕ ಮಾಡಿ ಯೋಗ ಕ್ಷೆಮಾ ವಿಚಾರಿಸಿ 20 ಸಾವಿರ ಆರ್ಥಿಕ ಸಹಾಯವನ್ನು ಮಗುವಿನ ತಾಯಿ ಸೌಮ್ಯರವರಿಗೆ ನೀಡಿದರು.

ಈ ಸಂದರ್ಭದಲ್ಲಿ ವೀರ -ವಿಕ್ರಮ ಕಂಬಳ ಸಮಿತಿ,ಸಿದ್ದಕಟ್ಟೆ -ಕೊಡಂಗೆ ಇದರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೋಡುಂಬ, ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಪದಾಧಿಕಾರಿಗಳಾದ ಚಂದ್ರಶೇಖರ ಪೂಜಾರಿ ಕೊಡಂಗೆ, ಕಿರಣ್ ಕುಮಾರ್ ಕಾಮಧೇನು ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರ್ಡಡಿ, ಮಧುಸೂದನ್ ಸಾಲಿಯಾನ್,ಪ್ರಮುಖರಾದ ಸತೀಶ್ ಪೂಜಾರಿ ಅಲಕ್ಕೆ, ಪ್ರಭಾಕರ ಪ್ರಭು, ತೇಜಸ್ ಪೂಜಾರಿ ಕರ್ಪೆ, ಯೋಗೀಶ್ ಪೂಜಾರಿ ಕರ್ಪೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *