Breaking
23 Dec 2024, Mon

ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪುಂಜಾಲಕಟ್ಟೆ ವಲಯದ ಉಳಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಪುಂಜಾಲಕಟ್ಟೆ ವಲಯದ ಉಳಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರ ಬಂಟ್ವಾಳ ತಾಲೂಕಿನ ಉಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿ. ಉಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚೆನ್ನಪ್ಪ ಸಾಲ್ಯಾನ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಸೌಲಭ್ಯ ದೊರೆಯುತ್ತಿತ್ತು , ಅದರಲ್ಲೂ ಮಹಿಳೆಯಾರಿಗೆ ಧೈರ್ಯ ತುಂಬುವ ಕಾರ್ಯ ಜ್ಞಾನವಿಕಾಸ ಕೇಂದ್ರದ ಮೂಲಕ ನಡೆಯುತ್ತಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರು ಚಿದಾನಂದ ರೈ ಕಕ್ಯೆ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ರವರು ಮಾತನಾಡಿ
ಮಹಿಳೆಯಾರು ನಾಲ್ಕು ಗೋಡೆಗಳ ಮದ್ಯೆ ಬಂದಿಯಾಗದೆ ಹೊರಗಿನ ಪ್ರಪಂಚ ಜ್ಞಾನ ತಿಳಿದು ಕೊಳ್ಳಬೇಕು.
ಬಡತನ ನಿವಾರಣೆಗೋಸ್ಕರ ಈ ಜ್ಞಾನವಿಕಾಸ ಕೇಂದ್ರ ಪ್ರಾರಂಭವಾಗಿ ಅ ಮೂಲಕ ಮಹಿಳೆಯರು ಸ್ವ ಉದ್ಯೋಗ ಮಾಡಿಕೊಂಡು . ಯಶಸ್ವಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಳಿ ಸರಕಾರಿ ಪ್ರಾಥಮಿಕ ಶಾಲೆಯ ನಿರ್ವತ ಮುಖ್ಯ ಶಿಕ್ಷಕ ಹಮಿದ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.

ಹಿರಿಯ ಸದಸ್ಯೆ ಅಪ್ಪಿ ಯವರು ಕೇಂದ್ರ ದ ಅನಿಸಿಕೆ ವ್ಯಕ್ತಪಡಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ , ಜ್ಞಾನವಿಕಾಸ ಕೇಂದ್ರದ ಹಿರಿಯ ಸದಸ್ಯೆ ಸುಂದರಿ, ಉಳಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರುಗಳು, ಒಕ್ಕೂಟದ ಪದಾಧಿಕಾರಿಗಳು ಸದಸ್ಯರುಗಳು,ಸೇವಾಪ್ರತಿನಿಧಿ ಉಷಾ, ವಿ ಎಲ್ ಇ ಸುಶ್ಮಿತಾ, ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿ,
ಜ್ಞಾನ ವಿಕಾಸ ಕೇಂದ್ರದ ಸಯೋಜಕಿ ಪ್ರೇಮ ವರದಿ ಮಂಡಿಸಿ,ಸೇವಾಪ್ರತಿನಿಧಿ ಶೇಖರ್ ವಂದಿಸಿದರು .ಸೇವಾಪ್ರತಿನಿಧಿ ಅಮೃತ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.
ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *